ಬೆಂಗಳೂರು: ಕಳಪೆ ಕಾಮಗಾರಿಯಿಂದಾಗಿ ಬೆಂಗಳೂರು ನಗರದ ರಸ್ತೆಗಳು ಹಾಳಾಗಿವೆ. ರಸ್ತೆ ಗುಂಡಿಗಳು ನಾಗರಿಕರನ್ನು ಬಲಿತೆಗೆದುಕೊಳ್ಳುತ್ತಿವೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರಹಾಕಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕೂಡಾ ಸಿಟ್ಟು ಹೊರಹಾಕಿದೆ.
ರಸ್ತೆ ಗುಂಡಿಗಳಿಂದ ಸುಮಾರು 16 ಜನ ಸಾವನ್ನಪ್ಪಿದ್ದಾರೆ, ಈ ಸಾವುಗಳಿಗೆ ಯಾರು ಹೊಣೆ? ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಎಂದರೆ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಮಾತ್ರ ಅಂದುಕೊಂಡಿದೆ ಬಿಜೆಪಿ. ಆದರೆ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಟ್ಟು ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಬಿಜೆಪಿ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ರಸ್ತೆ ಗುಂಡಿಗಳಿಂದ ಸುಮಾರು 16 ಜನ ಸಾವನ್ನಪ್ಪಿದ್ದಾರೆ, ಈ ಸಾವುಗಳಿಗೆ ಯಾರು ಹೊಣೆ?
ಬೆಂಗಳೂರು ಅಭಿವೃದ್ಧಿ ಎಂದರೆ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಮಾತ್ರ ಅಂದುಕೊಂಡಿದೆ ಬಿಜೆಪಿ.
ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಟ್ಟು ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಸಂಪೂರ್ಣ ಕಡೆಗಣಿಸಿದೆ ಬಿಜೆಪಿ ಸರ್ಕಾರ.
– @RLR_BTM pic.twitter.com/xZXoF4b1Yn— Karnataka Congress (@INCKarnataka) October 19, 2022


















































