ಬೆಂಗಳೂರು: ‘ಹಿಂದಿ ದಿವಸ್’ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ವೈಚಾರಿಕ ಗುದ್ದಾಟ ತೀವ್ರಗೊಂಡಿದೆ. ಹಿಂದಿ ಭಾಷೆ ಮೂಲಕ ಹಿಂದೂ ವಿಚಾರಧಾರೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಅದರಲ್ಲೂ ಕಾಂಗ್ರೆಸ್ ನಾಯಕರು ‘ಹಿಂದಿ ದಿವಸ್’ ಕಾರ್ಯಕ್ರಮವನ್ನು ಮುಂದಿಟ್ಟು ಬಿಜೆಪಿ ವಿರುದ್ದ ಟೀಕಾಸ್ತ್ರ ಪ್ರಯೋಗಿಸುತ್ತಿದೆ.
ಈ ನಡುವೆ, ‘ಕೈ’ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ‘ಹಿಂದಿ ದಿವಸ್’ ಎಂಬುದು ಕಾಂಗ್ರೆಸ್ ಪಕ್ಷದ ಕೂಸು ಎಂದು ಇತಿಹಾಸದತ್ತ ಬೊಟ್ಟು ಮಾಡಿದೆ. ಈ ಕುರಿತಂತೆ ಬಿಜೆಪಿ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಕಾಂಗ್ರೆಸ್‌ಗೆ ಸವಾಲು..
‘ಹಿಂದಿ ದಿವಸ್’ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ, ಎನ್‌ಇಪಿ ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶವನ್ನು ಮೋದಿ ಸರ್ಕಾರ ಕಲ್ಪಿಸಿದೆ. ಆದರೆ ಹಿಂದಿನ ಕಾಂಗ್ರೆಸ್ ಪಕ್ಷದ ಸರ್ಕಾರವೇ ರಾಷ್ಟ್ರವ್ಯಾಪಿ ‘ಹಿಂದಿ ದಿವಸ್’ತ್ರಿಭಾಷಾ ಸೂತ್ರ ಹೇರಿತು ಎಂದು ಆರೋಪಿಸಿದೆ.
ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡುತ್ತೇವೆ ಎಂದು ಸೋನಿಯಾ, ರಾಹುಲ್ ಗಾಂಧಿ ಅವರಿಂದ ಹೇಳಿಕೆ ಕೊಡಿಸುವ ಧಮ್ ಇದೆಯೇ? ಎಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸವಾಲು ಹಾಕಿದೆ.
ಸಿದ್ದರಾಮಯ್ಯನವರೇ,
ಮೋದಿ ಸರ್ಕಾರ ಎನ್‌ಇಪಿ ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದೆ.
ಆದರೆ @INCIndia ರಾಷ್ಟ್ರವ್ಯಾಪಿ #HindiDiwas, ತ್ರಿಭಾಷಾ ಸೂತ್ರ ಹೇರಿತು.
ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡುತ್ತೇವೆ ಎಂದು ಸೋನಿಯಾ, ರಾಹುಲ್ ಗಾಂಧಿ ಅವರಿಂದ ಹೇಳಿಕೆ ಕೊಡಿಸುವ ಧಮ್ ಇದೆಯೇ? pic.twitter.com/yycq5ug8lg
— BJP Karnataka (@BJP4Karnataka) September 14, 2022
























































