ಮಂಗಳೂರು : ಬಂದರು ನಗರ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ಇಂದು ಪ್ರಾರಂಭಗೊಂಡಿದೆ. ದೇವಾಲಯದಲ್ಲಿ ಶನಿವಾರ ನಡೆದ ಪೂಜಾ ಸನ್ನಿವೇಶ ನಾಡಿನ ಆಸ್ತಿಕ ಸಮುದಾಯದ ಚಿತ್ತ ಕೇಂದ್ರೀಕರಿಸಿತು.

ಶನಿವಾರ ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ , ಶತಕಲಶಾಭಿಷೇಕ, ಗಂಗಾಭಿಷೇಕ ನೆರವೇರಿತು , ಮಧ್ಯಾಹ್ನ ಮಹಾಪೂಜೆ ಬಳಿಕ ಸಮಾರಾಧನೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಕೈಂಕರ್ಯದಲ್ಲುಲಿ ಭಾಗಿಯಾಗಿ ಪುನೀತರಾದರು.
ದೇಗುಲದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಚಾತುರ್ಮಾಸ ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್, ಅಧ್ಯಕ್ಷ ಪದ್ಮನಾಭ ಪೈ, ಪ್ರಧಾನ ಸಂಯೋಜಕ ಸುರೇಶ ಕಾಮತ್, ಕಾರ್ಯದರ್ಶಿಗಳಾದ ಗಣಪತಿ ಪೈ, ಸುದರ್ಶನ್ ಮಲ್ಯ, ಗುರುದತ್ ಕಾಮತ್, ಕೋಶಾಧಿಕಾರಿ ಬಿ ಆರ್ ಭಟ್, ಮಾರೂರ್ ಶಶಿಧರ್ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


























































