ತುಮಕೂರು: ಪರಮಪೂಜ್ಯರ ಕೃಪೆಯಿಂದ ರಾಜ್ಯದ ಜನರ ಆಶೀರ್ವಾದದಿಂದ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರು ನಗರದಲ್ಲಿ ನಡೆದ ಕುಂಚಿಟಿಗರ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಕುಂಚಿಟಿಗ ಒಕ್ಕಲಿಗರನ್ನು ಒಪ್ಪಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ ಮಾಡಿದ್ದನ್ನು ಕೇಂದ್ರ ಒಪ್ಪಿಲ್ಲ ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಜ್ಯಸರ್ಕಾರಗಳಿಗೆ ಪಟ್ಟಿಗೆ ಸೇರಿಸುವ ಎಲ್ಲ ಅಧಿಕಾರ ಇದೆ. ಹಾಗಾಗಿ ರಾಜ್ಯದಲ್ಲಿ ಕುಂಚಿಟಿಗರನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿಸಲು ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಮಳೆಯ ನೀರನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಕಂಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಿದ್ದು ಅದಕ್ಕೆ ಮತ್ತೆ ನಾನು ಚಾಲನೆ ನೀಡಿದೆ ಇದ್ದರಿಂದ ತುಮಕೂರು. ಚಿತ್ರದುರ್ಗ. ಕೋಲಾರ .ಚಿಕ್ಕಬಳ್ಳಾಪುರ ಜಿಲ್ಲೆ ಅನುಕೂಲವಾಗಲಿದೆ ಎಂದರು.
ರೈತರು ಸಂದರ್ಭಕ್ಕೆ ತಕ್ಕಂತೆ ಬೆಳೆಯಬೇಕು ಇಸ್ರೇಲ್ ಗೆ ಹೋಗಿ ಕಲಿಯಬೇಕಾಗಿರುವುದು ಏನು ಇಲ್ಲ ಈ ಬಾರಿ ನಾನು ಬೆಳೆದಿರುವ ಬೆಳೆಯಿಂದ ಬಾಳೆ ಬೆಳೆಯಿಂದ ಸುಮಾರು 70 ಸಾವಿರದಿಂದ ಒಂದು ಲಕ್ಷದವರೆಗೆ ಆದಾಯ ಬರುತ್ತದೆ ಎಂದು ತಿಳಿಸಿದರು.
ಯಾವ ರೀತಿ ಮುಖ್ಯಮಂತ್ರಿಯಾಗುತ್ತಾನೆ ಎಂದು ಗೊತ್ತಿಲ್ಲ. ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ. ಮೂರನೇ ಬಾರಿ ಜನರ ಆಶೀರ್ವಾದ ಮತ್ತು ಪರಮಪೂಜ್ಯರ ಕೃಪೆಯಿದ್ದರೆ. ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ ಎಂದವರು ಹೇಳಿದರು.
ಕುಂಚಿಟಿಗ ಸಮುದಾಯದವರನ್ನು ಒಬಿಸಿ ಪಟ್ಟಿಗೆ ನಾನೇ ಸೇರಿಸುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದರು.
ದೇವೇಗೌಡರ ಆರೋಗ್ಯ ಕೆಡುತ್ತದೆ ಅವರು ಇಂದು ನೋವಿನಲ್ಲಿ ಇದ್ದಾರೆ. ಅಂದು ಇಲ್ಲಿನ ಕುತಂತ್ರ ರಾಜಕೀಯವೇ ಕಾರಣ ಎಂದ ಅವರು, ವಿರೋಧ ಪಕ್ಷದಲ್ಲಿ ಇದ್ದುಕೊಂಡೇ ದೇವೇಗೌಡರು ಅನೇಕ ಕೊಡುಗೆ ನೀಡಿದ್ದಾರೆ ಅವರ ಹೆಸರು ಉಳಿಸುವ ಕೆಲಸವನ್ನು ಮಾಡುತ್ತೇನೆ ಎಂದರು.


























































