ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕೇಳಿಬಂದಿರುವ 40% ಕಮೀಷನ್ ಆರೋಪ ಕುರಿತಂತೆ ಪ್ರದೇಶ ಕಾಂಗ್ರೆಸ್ ಪಕ್ಷ ಪ್ರಧಾನಿ ನರೆಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಗುತ್ತಿಗೆದಾರರ ಸಂಘ ಪತ್ರ ಬರೆದಾಗ, ಸಂತೋಷ್ ಪಾಟೀಲ್ ಪತ್ರ ಬರೆದಾಗ, ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ತಾವು ಬಂದು ಹೋದ ನಂತರ ತೇಪೆ ಹಾಕಿದ ರಸ್ತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳುವ ಅಗತ್ಯ ಬರುತ್ತಿರಲಿಲ್ಲ. ಮಾನ್ಯ ಪ್ರಧಾನಿಗಳೇ, 40% ಕಮಿಷನ್ ದೂರಿನ ಬಗ್ಗೆ ತಾವು ಕ್ರಮ ಕೈಗೊಳ್ಳುವುದು ಯಾವಾಗ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಗುತ್ತಿಗೆದಾರರ ಸಂಘ ಪತ್ರ ಬರೆದಾಗ,
ಸಂತೋಷ್ ಪಾಟೀಲ್ ಪತ್ರ ಬರೆದಾಗ,
ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ತಾವು ಬಂದು ಹೋದ ನಂತರ ತೇಪೆ ಹಾಕಿದ ರಸ್ತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳುವ ಅಗತ್ಯ ಬರುತ್ತಿರಲಿಲ್ಲ.ಮಾನ್ಯ ಪ್ರಧಾನಿಗಳೇ, 40% ಕಮಿಷನ್
ದೂರಿನ ಬಗ್ಗೆ ತಾವು ಕ್ರಮ ಕೈಗೊಳ್ಳುವುದು ಯಾವಾಗ?— Karnataka Congress (@INCKarnataka) June 25, 2022


























































