ಉಡುಪಿ: ಶೋಷಿತರ ಪಾಲಿಗೆ ಆಪತ್ಬಾಂಧವ ಎನಿಸುತ್ತಿರುವ ಸಾಮಾಜಿಕ ಹರಿಕಾರ ಡಾ.ಗೋವಿಂದ ಬಾಬು ಪೂಜಾರಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸೂರಿಲ್ಲದ ಅಸಹಾಯಕರಿಗೆ ಮನೆಯನ್ನೇ ಕೊಟ್ಟು ಆಧುನಿಕ ಧಾನಶೂರ ಕರ್ಣ ಎನ್ನಿಸಿರುವ ಕರಾವಳಿ ಮೂಲದ ಉದ್ಯಮಿ, ಅನಾರೋಗ್ಯದಿಂದ ಬಳಲುತ್ತಿರುವ ಮಂದಿಯ ಮೇಲೂ ಕರುಣಾಮಯಿಯಾಗಿ ನೆರವಿನ ಹಸ್ತಚಾಚುವವರು. ಜನಸಾಮಾನ್ಯರನ್ನೇ ದೇವಧೂತರೆಂಬಂತೆ ಕಾಣುವ ಗೋವಿಂದ ಬಾಬು ಪೂಜಾರಿಯವರು ಕರಾವಳಿ ಭಾಗದಲ್ಲಿ, ಅದರಲ್ಲೂ ಉಡುಪಿ, ಕುಂದಾಪುರ, ಬೈಂದೂರು ಸುತ್ತಮುತ್ತ ಜನಪ್ರತಿನಿಧಿಗಳನ್ನೂ ಮೀರುವ ಸೇವೆಯ ಮೂಲಕ ಜನಾನುರಾಗಿಯಾದ್ದಾರೆ. ಇದೀಗ ಅನಾರೋಗ್ಯದ ನಡುವೆಯೂ ಶಿಕ್ಷಣದಲ್ಲಿ ಸಾಧನೆ ಮಾಡಿದ ಬಾಲಕಿಯ ಬದುಕಿಗೆ ಬೆಳಕಾಗಿ ಮತ್ತೊಮ್ಮೆ ಗಮನಸೆಳೆದಿದ್ದಾರೆ.
ಶ್ರಾವ್ಯ ಬಾಳಲ್ಲೂ ಪೂಜಾರಿ ಬೆಳಕು..
ಕರಾವಳಿಯ ಬಗ್ವಾಡಿಯ ವಿದ್ಯಾರ್ಥಿನಿ ಶ್ರಾವ್ಯ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಕಲಿತು ಮೇಧಾವಿಯಾಗಬೇಕೆಂಬ ಹೊಂಗನಸು ಹೊತ್ತ ಶ್ರಾವ್ಯಗೆ ಅದ್ಯಾವಾಗ ಕಾಯಿಲೆಯ ಸವಾಲು ಎದುರಾಯಿತೋ ಅದಾಗಲೇ ಶಿಕ್ಷಣವೂ ಕಬ್ಬಿಣದ ಕಡಲೆಯಂತಾಯಿತು. ಆದರೂ ಈ ಛಲಗಾತಿ ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದಲೇ ಶಾಲೆಗೆ ತೆರಳಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ. ಈ ಪರೀಕ್ಷೆಯಲ್ಲಿ ಆಕೆ ಗೆದ್ದು ಬೀಗಿದ್ದಾಳೆ.
ಈ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೋಬ್ಬರಿ 581 ಅಂಕ ಪಡೆದ ಸಾಧಕಿ ಎಂಬ ಖ್ಯಾತಿಗೂ ಶ್ರಾವ್ಯ ಪಾತ್ರಳಾಗಿದ್ದಾಳೆ. ಆದರೆ ತನ್ನ ಮುಂದಿನ ಶಿಕ್ಷಣ, ಮುಂದಿನ ಚಿಕಿತ್ಸೆ ಬಗ್ಗೆ ಈಕೆ ಹಾಗೂ ಹೆತ್ತವರು ಚಿಂತೆಯಲ್ಲಿ ಮುಳುಗಿದ್ದಾರೆ.
ಬಡ ಕುಟುಂಬದ ಹೆಣ್ಣುಮಗಳ ಈ ಪರಿಸ್ಥಿತಿ ಬಗ್ಗೆ ಊರ ಹುಡುಗರ ಮಾಲಕ ಸುದ್ದಿ ತಿಳಿದಿದ್ದೇ ತಡ, ನೆರವಿಗೆ ಧಾವಿಸಿದ ಉದ್ಯಮಿ, ChefTalk ಕಂಪನಿಯ ಮುಖ್ಯಸ್ಥ ಡಾ.ಗೋವಿಂದ ಬಾಬು ಪೂಜಾರಿಯವರು, ಶಿಕ್ಷಣ ಹಾಗೂ ವೈದ್ಯಕೀಯ ಖರ್ಚನ್ನು ತಾನು ನೋಡಿಕೊಳ್ಳುವುದಾಗಿ ಹೇಳಿ, ಬಡ ಕುಟುಂಬಕ್ಕೆ ಚೈತನ್ಯ ತುಂಬಿದ್ದಾರೆ.
ಬೆಂಗಳೂರಿನಲ್ಲಿ ಅನೇಕ ಕಂಪನಿಗಳನ್ನು ನಡೆಸುತ್ತಿರುವ ಡಾ.ಗೋವಿಂದ ಬಾಬು ಪೂಜಾರಿಯವರು ಬಗ್ವಾಡಿಗೆ ಖುದ್ದು ಭೇಟಿ ನೀಡಿ ಈ ಬಡಪಾಯಿ ವಿದ್ಯಾರ್ಥಿನಿಯ ಮನೆಗೂ ತೆರಳಿ ಕುಶಲೋಪರಿ ವಿಚಾರಿಸಿದರು. ಅನಾರೋಗ್ಯವು ಶ್ರಾವ್ಯಾಳ ಭವಿಷ್ಯವನ್ನು ಕೊಲ್ಲುತ್ತಿದೆ. ಆಕೆಯ ಚಿಕಿತ್ಸೆಗೆ ಲಕ್ಷಗಟ್ಟಲೆ ಅಗತ್ಯವಿದೆ ಎಂಬ ವಿಚಾರವನ್ನು ತಿಳಿದರು. ಜೊತೆಗೆ ಕಾಲೇಜು ಶಿಕ್ಷಣದ ಕನಸು ಕಾಣುತ್ತಿರುವ ಶ್ರಾವ್ಯ ಬಗ್ಗೆ ತಿಳಿದು ಮಮ್ಮಲ ಮರುಗಿದರು. ಚಿಕಿತ್ಸೆಗೆ ಹಣವಿಲ್ಲದೆ ಮಲಗಿದ್ದ ಶ್ರಾವ್ಯಗೆ ಮೊದಲು ಚಿಕಿತ್ಸೆ ಪೂರ್ಣಗೊಳಿಸುವಂತೆ ಹೇಳಿ ಚಿಕಿತ್ಸೆಗೆ ಅಗತ್ಯವಿರುವಷ್ಟು ಖರ್ಚನ್ನು ತಾನೇ ಒದಗಿಸುವುದಾಗಿ ಭರವಸೆ ನೀಡಿದರು. ದೊಡ್ಡ ಸಾಧಕಿಯಾಗುವ ಹುಡುಗಿ ಅದಕ್ಕೆ ಮೊದಲು ಆರೋಗ್ಯ ಸರಿಪಡಿಸಿಕೊಳ್ಳಬೇಕು ಎಂದು ಸ್ಥಳದಲ್ಲೇ ವೈದ್ಯರ ಸಂಪರ್ಕಿಸಿ ಸಂಪೂರ್ಣ ಚಿಕಿತ್ಸೆ ವೆಚ್ಚ ಬರಿಸಿ ಒಂದು ವರ್ಷಗಳ ಕಾಲ ತಾನು ಆರೋಗ್ಯ ನೋಡಿಕೊಳ್ಳುವ ಆಶ್ವಾಸನೆ ನೀಡಿದರು.
ದೇಶದ ಗಡಿ ಕಾಯಲು ಹೋಗುವ ಉತ್ಸಾಹಿ ಯುವಕರಿಗೆ ಬೆನ್ನೆಲುಬಾಗಿ ನಿಂತ ಗೋವಿಂದ ಬಾಬು ಪೂಜಾರಿ
ಕೊರೊನಾ ಸೈನಿಕರ ಸೇವೆ.. ಸಾಮಾಜಿಕ ಸೇನಾನಿ ಗೋವಿಂದ ಬಾಬು ಪೂಜಾರಿಗೆ ‘ಭಾರತ ಗೌರವ’ ಪ್ರಶಸ್ತಿ
ಗೋವಿಂದ ಪೂಜಾರಿ ‘ಮನೆಗಳ ದಾನ’.. ಉದ್ದೇಶ, ರಹಸ್ಯ ಏನು ಗೊತ್ತಾ..?
ಶಿಕ್ಷಣ ಕಲ್ಪಿಸುವ ‘ಹಾಜಬ್ಬ’, ಉದ್ಯೋಗ ನೀಡುವ ‘ಗೋವಿಂದ’.. ಕರಾವಳಿಯ ಎರಡು ಮುತ್ತುಗಳು..


























































