ಮಂಡ್ಯ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ.
ಮದ್ದೂರಿನಲ್ಲಿ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಹೇಳುತ್ತಿದ್ದಾರೆ. ಆದ್ರೆ ಈವರೆಗೂ ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ ಎಂದರು.
ಈ ಬಗ್ಗೆ ಯೋಚನೆ ಮಾಡಿ ತೀರ್ಮಾನ ಮಾಡುವುದಾಗಿ ತಿಳಿಸಿದ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜೆ.ಡಿ.ಎಸ್ ಮ್ಯಾಚ್ ಫಿಕ್ಸಿಂಗ್..?
ಬಿಜೆಪಿ ಜೆ.ಡಿ.ಎಸ್ ಹೊಂದಾಣಿಕೆ ರಾಜಕಾರಣ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ಜೆ.ಡಿಎಸ್ ಜೊತೆ ಅಲೈಯನ್ಸ್ ಆದ್ರು ಮಾಡ್ಕೊಳ್ಳಲಿ, ಅಂಡ್ರಸ್ಟ್ಯಾಂಡಿಗಾದ್ರು ಮಾಡ್ಕೊಳ್ಳಲಿ, ಮ್ಯಾಚ್ ಫಿಕ್ಸಿಂಗ್ ಆದ್ರು ಮಾಡ್ಕೊಳ್ಳಲಿ. ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು.
ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದ ಅವರು, ನಾನು ಕಾಂಗ್ರೆಸ್ ನಲ್ಲಿ ನೆಮ್ಮದಿಯಾಗಿದ್ದೇನೆ ಎಂದರು.