ದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಮಿನಿಮಹಾ ಸಮರದ ಪೈಕಿ ಉತ್ತರಾಖಂಡದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.
ಮತ ಎಣಿಕೆಯುದ್ದಕ್ಕೂ ತೀವ್ರ ಕುತೂಹಲಕಾರಿ ಸನ್ನಿವೇಶವೇ ವ್ಯಕ್ತವಾಗಿದ್ದು ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದ್ದರಿಂದ ಕಮಲ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿತ್ತು. ಇದೀಗ ಬಿಜೆಪಿ ಎರಡನೇ ಬಾರಿಗೆ ಗದ್ದುಗೆಗೇರುವ ಸಂಭ್ರಮದಲ್ಲಿದೆ.
ಉತ್ತರಾಖಂಡ: ಬಲಾಬಲ ಹೀಗಿದೆ.
- ಒಟ್ಟು ಸ್ಥಾನಗಳು : 70
- ಮ್ಯಾಜಿಕ್ ಸಂಖ್ಯೆ: 36
- BJP : 48
- CONG: 18
- OTHERS: 4