ಕೀವ್: ಉಕ್ರೇನ್ ಮೇಲಿನ ರಷ್ಯಾ ದಾಳಿ ಮುಂದುವರಿದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಆಕ್ಷೇಪದ ನಡುವೆಯೂ ರಷ್ಯಾ ಸೇನೆ ಉಕ್ರೇನ್ ಮೇಲೆ ಸರಣಿ ದಾಳಿಯನ್ನು ಮುಂದುವರಿಸಿದೆ. ಈಗಾಗಲೇ ಉಕ್ರೇನ್‌ನ ಹಲವು ನಗರಗಳು ರಷ್ಯಾ ಸೇನೆಯ ವಶವಾಗಿದ್ದು ಸೇನಾ ದಾಳಿ ಮುಂದುವರಿದಿದೆ.
ಈ ನಡುವೆ, ಉಕ್ರೇನ್ ಜೊತೆ ಸಂಧಾನ ನಡೆಸಿ ಕದನ ವಿರಾಮಕ್ಕೆ ಮುಂದಾಗಬೇಕೆಂದು ಹಲವು ರಾಷ್ಟ್ರಗಳು ರಷ್ಯಾ ಮುಂದೆ ಸಲಹೆಗಳನ್ನು ಇಟ್ಟಿವೆ. ಆದರೆ, ಉಕ್ರೇನ್ ಸೇನೆ ಶಸ್ತ್ರ ತ್ಯಜಿಸಿದರೆ ಮಾತ್ರ ಮಾತುಕತೆ ಎಂಬ ಸಂದೇಶವನ್ನು ರಷ್ಯಾ ರವಾನಿಸಿದೆ.
ಈ ನಡುವೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶನಿವಾರ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿ ಎಚ್ಚರಿಕೆಯ ಸಂದಶ ನೀಡಿದೆ. ಸರ್ಕಾರಿ ಅಧಿಕಾರಿಗಳ ಸೂಚನೆಯಿಲ್ಲದೆ ಯಾವುದೇ ಗಡಿ ಪೋಸ್ಟ್‌ಗಳಿಗೆ ತೆರಳದಂತೆ ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸಲಹೆ ನೀಡಿದೆ.