ಕೆಂಟಕಿ: ಇದು ನಿಜಕ್ಕೂ ಸಂಶೋಧಕರ ಅಪ್ರತಿಮ ಸಾಧನೆ. ಪೈಲೆಟ್ ಇಲ್ಲದೆ ಹಾರಾಡಬಲ್ಲ ಹೆಲಿಕಾಪ್ಟರ್ ಹೇಗಿರುತ್ತೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಇದೀಗ ಉತ್ತರ ಸ್ಪಷ್ಟವಾಗಿದೆ.
ಸ್ವತಂತ್ರ ವಿಮಾನಗಳ ಸಂಶೋಧನೆಯಲ್ಲಿ ತೊಡಗಿರುವ ತಜ್ಞರ ತಂಡ ಅಮೆರಿಕದ ಕೆಂಟಕಿಯಲ್ಲಿ ‘ಬ್ಲ್ಯಾಕ್ ಹಾಕ್’ ಹೆಲಿಕಾಪ್ಟರನ್ನು ಬಾನೆತ್ತರಕ್ಕೆ ಹಾರಿಬಿಟ್ಟಿದೆ. ಸುದೀರ್ಘ ಹೊತ್ತು ಬಾನಂಗಳದಲ್ಲಿ ಪೈಲಟ್ ಸಹಾಯವಿಲ್ಲದೆ ಹಾರಾಟ ನಡೆಸಿ ಯಶೋಗಾಥೆಗೆ ಸಾಕ್ಷಿಯಾಯಿತು. ಕೆಂಟುಕಿಯ ಫೋರ್ಟ್ ಕ್ಯಾಂಪ್‌ಬೆಲ್‌ನಲ್ಲಿ ಅಮೆರಿಕದ ರಕ್ಷಣಾ ಸಂಶೋಧನಾ ಕಾರ್ಯಕ್ರಮ ಸಂದರ್ಭದಲ್ಲಿ ಈ ಕಂಪ್ಯೂಟರ್-ಚಾಲಿತ ಹೆಲಿಕಾಪ್ಟರನ್ನು ಪರೀಕ್ಷಿಸಲಾಯಿತು. ಯಶೋಗಾಥೆ ಬರೆದ ವಿಜ್ಞಾನಿಗಳಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.
WATCH: A Black Hawk helicopter flew for the first time without pilots in Kentucky. The aircraft flew for 30 minutes through a simulated cityscape avoiding imagined buildings before performing a perfect landing pic.twitter.com/SD01LWhUZe
— Reuters Asia (@ReutersAsia) February 12, 2022