ದೆಹಲಿ: ಕೊರೋನಾ ವೈರಾಣು ದೇಶಾದ್ಯಂತ ಆತಂಕದ ಅಲೆ ಎಬ್ಬಿಸಿದೆ. ವಿವಿಧ ರಾಜ್ಯಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ 1,41,986 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ ದೇಶದಲ್ಲಿ ಓಮಿಕ್ರಾನ್ ಕೇಸ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಇದೇ ವೇಳೆ ಒಂದೇ ದಿನದಲ್ಲಿ 285 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
















































