ಚೆನ್ನೈ: ಸೇನಾ ಸರ್ವೋಚ್ಛ ಅಧಿಕಾರಿ ಜ.ಬಿಪಿನ್ ರಾವತ್ ಸಾವಿಗೆ ಕಾರಣವಾದ ದುರ್ಘಟನೆ ಬಗ್ಗೆ ತನಿಖೆ ನಡೆದಿರುವಂತೆಯೇ ಗುರುವಾರ, ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಕೂಡಾ ಪತ್ತೆಯಾಗಿದೆ.
ತಮಿಳುನಾಡಿನ ಕೂನೂರಿನಲ್ಲಿ ಅತ್ಯಾಧುನಿಕ ಎಂಐ 17ವಿ5 ಹೆಲಿಕಾಪ್ಟರ್ ಬುಧವಾರ ಪತನವಾಗಿದ್ದು, ದೇಶದ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 11 ಮಂದಿ ಸಾವನ್ನಪ್ಪಿದ್ದರು.
ನಿಗೂಢ ದುರ್ಘಟನೆ ಬಗ್ಗೆ ತನಿಖೆಗೆ ಬ್ಲ್ಯಾಕ್ ಬಾಕ್ಸ್ ಅಗತ್ಯವಿತ್ತು. ಅದಕ್ಕಾಗಿ ಕಳೆದೆರಡು ದಿನಗಳಿಂದ ಹುಡುಕಾಡುತ್ತಿದ್ದ ತಂಡ ಇಂದು ಪತ್ತೆ ಮಾಡಿದೆ. ಹೆಲಿಕಾಪ್ಟರ್ ದುರಂತಕ್ಕೀಡಾದ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬ್ಯ್ಲಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.