ಕೆಲವು ವರ್ಷಗಳ ಹಿಂದೆ ಪಾರ್ಕೊಂದರಲ್ಲಿ ಯವಕನೊಬ್ಬ ಹುಲಿಯ ಬಾಯಿಗೆ ಆಹಾರವಾದ ಘಟನೆಯ ವೀಡಿಯೋ ವೈರಲ್ ಆಗಿತ್ತು. ಇದೀಗ ಸಿಂಹದ ಸರದಿ.
ಹೈದರಾಬಾದ್‌ನ ನೆಹರೂ ಝೂಲಾಜಿಕಲ್ ಪಾರ್ಕ್‌ನಲ್ಲಿ ಭಯಾನಕ ಸನ್ನಿವೇಶವೊಂದು ನಡೆದಿದೆ. ಯುವಕನೊಬ್ಬ ಸಿಂಹದ ಗುಹೆಯ ಬಳಿ ಕುಳಿತು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ.
A 31yr old man was found looking for diamonds hidden inside a Lion's enclosure at Nehru Zoological Park, Hyderabad. Police say he's mentally disturbed. Good that the alert zoo staff intervened on time & saved his life.
P.S. Never blindly follow Google maps. I repeat, NEVER. pic.twitter.com/LLVx74YerH— Praveen Angusamy IFS 🐾 (@JungleWalaIFS) November 24, 2021
ಸಿಂಹದ ಗುಹೆಯ ಪಕ್ಕದ ಬಂಡೆಯ ಮೇಲೆ ಕುಳಿತ ಈತ ಜನರ ಎಚ್ಚರಿಕೆಗೆ ಕಿವಿ ಕೊಡಲೇ ಇಲ್ಲ. ಸಿಂಹವು ಹತ್ತಿರಕ್ಕೆ ಬಂದು ಘರ್ಜಿಸಿದರೂ ಈತ ಜಪ್ಪೆನ್ನಲಿಲ್ಲ. ಈತನ ರಂಪಾಟದ ಸುದ್ದಿ ತಿಳಿದ ಪಾರ್ಕ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಈತನನ್ನು ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.