ಬೆಂಗಳೂರು: ನಾಡಿನ ಶ್ರದ್ಧಾ ಕೇಂದ್ರಗಳಲ್ಲೊಂದಾಗಿರುವ ಇಸ್ಕಾನ್ ಇದೀಗ ಕಾರ್ತಿಕ ದೀಪೋತ್ಸವದಿಂದಾಗಿ ನಾಡಿನ ಗಮನಸೆಳೆದಿದೆ. ಪ್ರತೀ ದಿನವೂ ಭಗವಂತನಿಗೆ ತುಪ್ಪದ ದೀಪದಿಂದ ಆರತಿ ಮಾಡುವ ಸೌಭಾಗ್ಯ ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಭಕ್ತ ಸಮೂಹಕ್ಕೆ ಸಿಗುತ್ತಿದೆ.
https://youtu.be/ybze-MBsufo
ನಿತ್ಯವೂ ರಾತ್ರಿಯಾಗುತ್ತಿದ್ದಂತೆಯೇ ಇಸ್ಕಾನ್ ಈ ವಿಶೇಷ ಕೈಂಕರ್ಯಕ್ಕೆ ಸಾಕ್ಷಿಯಾಗುತ್ತಿದೆ. ಕಾರ್ತಿಕ ಮಾಸದಲ್ಲಿ ಸಾವಿರಾರು ಮಂದಿ ಭಕ್ತರು ಈ ತುಪ್ಪ ದೀಪದ ಕೈಂಕರ್ಯ ಮೂಲಕ ಪುನೀತರಾಗುತ್ತಿದ್ದಾರೆ. ದೇವಾಲಯದಲ್ಲಿ ಈ ವಿಧಿವಿಧಾನಕ್ಕಾಗಿ ಮಾಡಲಾಗಿರುವ ವಿಶೇಷ ವ್ಯವಸ್ಥೆಯೂ ಅಚ್ಚುಕಟ್ಟಾಗಿದ್ದು, ಭಕ್ತ ಸಮೂಹದ ಮೆಚ್ಚುಗೆಗೆ ಪಾತ್ರವಾಗಿದೆ.