ಕಲಬುರಗಿ: ಚಿಂಚೋಳಿ, ಸೇಡಂ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಭೂಕಂಪದಿಂದಾಗಿ ಮನೆಗಳು ಹಾನಿಗೊಳಗಾಗಿವೆ. ಈ ಪ್ರದೇಶಗಳಲ್ಲಿ ಪರಿಹಾರ ಕಾರ್ಯವನ್ನು ತುರ್ತಾಗಿ ಕೈಗೊಳ್ಳುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಭೂಕಂಪ ಸಂಭವಿಸಿರುವ ಗಡಿಕೇಶ್ವಾರ ಗ್ರಾಮದಿಂದ ದೂರವಾಣಿ ಮೂಲಕ ಸಿಎಂ ಅವರೊಂದಿಗೆ ಸಿದ್ದರಾಮಯ್ಯ ಅವರು ಮಾತನಾಡಿದರು. ಮನೆಗಳನ್ನು ತೊರೆದವರಿಗೆ ವಾಸಕ್ಕೆ ಶೆಡ್ ಗಳನ್ಮು ನಿರ್ಮಿಸಿಕೊಡಬೇಕು. ಗ್ರಾಮಸ್ಥರಿಗೆ ಊಟ, ಹೊದಿಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.