ದೆಹಲಿ: ಅತ್ಯುತ್ತಮ ನೆಟ್ವರ್ಕ್, ಕಡಿಮೆ ದರದಲ್ಲಿ ಹೆಚ್ಡಿ ಕರೆ ಸೌಲಭ ಎಂದು ಹೇಳುತ್ತಾ ಜನಸಾಮಾನ್ಯರನ್ನು ಸೆಳೆಯುತ್ತಿದ್ದ ಏರ್‌ಟೆಲ್ ಇದೀಗ ಉಲ್ಟಾ ಹೊಡೆದಿದೆ. ಈ ವರೆಗೂ ಪ್ರಿಪೆಯ್ಡ್ ಗ್ರಾಹಕರಿಗೆ ನೀಡುತ್ತಿದ್ದ 49 ರೂಪಾಯಿಗಳ ಸ್ಮಾರ್ಟ್ ರೀಚಾರ್ಜ್ ಪ್ಲಾನನ್ನು ಸ್ಥಗಿತಗೊಳಿಸುವ ಮೂಲಕ ಏರ್‌ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.
ಬಹುತೇಕ ಮಂದಿ ತಮ್ಮ ಸ್ಟ್ಯಾಂಡ್‌ಬೈ ನಂಬರ್ ಸ್ಥಗಿತಗೊಳ್ಳದಂತೆ ಸ್ಮಾರ್ಟ ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದರು. ಬಹುಕಾಲದಿಂದ ಬಳಸುತ್ತಿದ್ದ ನಂಬರ್ ಸ್ಥಗಿತಗೊಳ್ಳದಿರಲಿ ಎಂಬ ಕಾರಣಕ್ಕಾಗಿ ಬಹುತೇಕ ಗ್ರಾಹಕರು ಮಾಸಿಕ 49 ರೂಪಾಯಿಯ ಸ್ಮಾರ್ಟ್ ರಿಚಾರ್ಜ್ ಅವಲಂಬಿತರಾಗಿದ್ದರು. ಇದೀಗ ಈ ಮೊತ್ತದ ಸಬ್‌ಸ್ಕ್ರಿಪ್ಷನ್ ಸ್ಥಗಿತಗೊಂಡಿದೆ ಎಂದು ಕಂಪನಿ ಹೇಳುತ್ತಿದೆ. ಪ್ರಸ್ತುತ ಮಾಸಿಕ ಕನಿಷ್ಠ 79 ರೂಪಾಯಿ ರೀಚಾರ್ಜ್ ಮಾಡಬೇಕಾಗುತ್ತದೆ.
ಈ ನಡುವೆ 79 ರೂಪಾಯಿಗಳ ಸ್ಮಾರ್ಟ್ ರೀಚಾರ್ಜ್ ಪ್ಲಾನ್ ಕೂಡಾ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂದು ರೀಟೇಲ್ ಸಿಬ್ಬಂದಿ ಹೇಳಿಕೊಳ್ಳುತ್ತಿದ್ದಾರೆ. ಈ ಕನಿಷ್ಠ ಸ್ಮಾರ್ಟ್ ರೀಚಾರ್ಜ್ ದರ 200 ರೂಪಾಯಿಗೆ ನಿಗದಿಪಡಿಸುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಏರ್‌ಟೆಲ್ ಸಂಸ್ಥೆಯ ಈ ನಡೆಯನ್ನೇ ಇತರ ನೆಟ್‌ವರ್ಕ್‌ಗಳೂ ಅನುಸರಿಸುವ ಸಾಧ್ಯತೆಗಳೇ ಹೆಚ್ಚು ಎಂಬ ಮಾತುಗಳೂ ಹರಿದಾಡುತ್ತಿವೆ.
ಇದರೆಲ್ಲದರ ನಡುವ, ಬಿಎಸ್‌ಎನ್‌ಎಲ್ ಸಂಸ್ಥೆಯೇ ಜನರಿಗೆ ಹತ್ತಿರವಾಗುತ್ತಿದೆ. 399 ರೂಪಾಯಿ ರೀಚಾರ್ಜ್ ಮಾಡಿದರೆ 10 ತಿಂಗಳ ಕಾಲ ವಾಲಿಡಿಟಿ ಇರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನತ್ತ ಗ್ರಾಹಕರು ವಲಸೆ ಹೋಗುತ್ತಿದ್ದಾರೆ. ಈ ಪೋರ್ಟ್ ಕ್ರಾಂತಿಯಿಂದಾಗಿ ಬಿಎಸ್‌ಎನ್‌ಎಲ್ ಸಿಮ್ ಕೊರತೆ ಉಂಟಾಗಿರುವುದು ಮತ್ತೊಂದು ಬೆಳವಣಿಗೆ.