ಬೆಂಗಳೂರು: ನೋ ಪಾರ್ಕಿಂಗ್ ವಿಚಾರ ಹಾಗೂ ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶ ಮತ್ತೆ ಸ್ಫೋಟಗೊಂಡಿದೆ.
ಟೋಯಿಂಗ್ ಸಿಬ್ಬಂದಿಯೊಂದಿಗೆ ಸಾರ್ವಜನಿಕರ ಜಗಳವಾಡಿದ್ದಲ್ಲದೆ, ಟೋಯಿಂಗ್ ಕಿರಿಕ್‌ನಿಂದ ಬೇಸತ್ತ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಯನ್ನು ಅಟ್ಟಾಡಿಸಿ ಥಳಿಸಿದ ಘಟನೆ ಬೆಂಗಳೂರು ಬಳಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯ ಇಂದಿರಾನಗರ ಮೆಟ್ರೋ ಬಳಿ ಘಟನೆ ನಡೆದ್ದು, ಪಾರ್ಕ್ ಮಾಡುದ್ದ ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಏಕಾಏಕಿ ಟೋಯಿಂಗ್ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಯುವಕರು ಮುಗಿಬಿದ್ದರು. ವಾಹನಗಳನ್ನ ಕೊಂಡಯ್ಯಲು ಬಿಡುವುದಿಲ್ಲ ಎಂದು ಗಲಾಟೆ ಎಬ್ಬಿಸಿದರು. ಈ ವೇಳೆ ಟೋಯಿಂಗ್ ತಂಡದ ಸಿಬ್ಬಂದಿಯನ್ನು ಥಳಿಸಿದ ಪ್ರಸಂಗವೂ ನಡೆದಿದೆ. ಈ ಘಟನ ಕುರಿತಂತೆ ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.