ಕೋವಿಡ್ 3ನೇ ಅಲೆ ಎದರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ.. ತಜ್ಞರ ಸಮಿತಿ ಅಭಿಪ್ರಾಯದ ಮೇಲೆ ಮುಂದಿನ ಕ್ರಮ: ಲಾಕ್ ಡೌನ್ ಅಥವಾ ಭಿಗಿ ಕ್ರಮ
ಯಲಹಂಕ: 75 ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ಆಚರಿಸಿ, ಮನಗಳ ಮೇಲೆ ಬಾವುಟ ಹಾರಿಸಿ ಗೌರವ ಸೂಚಿಸಿ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮನವಿ ಮಾಡಿದ್ದಾರೆ.
ತಾಲ್ಲೂಕು ಆದ ನಂತರ ಮೂರನೇ ಸ್ವಾತಂತ್ರ್ಯ ದಿನಾಚರಣೆ ಪುರ್ವ ಬಾವಿ ಸಭೆಯಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್ ಕೊರೋನ ಮೂರನೆ ಅಲೆ ಎದುರಿಸಲು ಸರ್ಕಾರ ಸಕಲ ಸಿದ್ಧತೆ ಕೈಗೊಂಡಿದ್ದು, ವಿಶೇಷವಾಗಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗ್ತಿದೆ, ಮಕ್ಕಳಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗ್ತಿದೆ ಎಂದರು.
ಯಲಹಂಕ ಭಾಗದ ಎಲ್ಲಾ ಐಸಿಯು, ವೆಂಟಿಲೇಟರ್, ಬೆಡ್ ಗಳನ್ನ ಸಿದ್ದ ಇಟ್ಟುಕೊಂಡಿದ್ದು ಕರ್ನಾಟಕದಲ್ಲಿ ಸಧ್ಯ ಪರಿಸ್ಥಿತಿ ಉತ್ತಮವಾಗಿದೆ. ಕೇರಳ ಹೋಲಿಸಿದರೆ ನಾವು ಭಯಪಡುವ ಅವಶ್ಯಕತೆ ಇಲ್ಲವಾದರೂ ಎಚ್ಚರವಾಗಿರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೂರನೆ ಅಲೆಗೆ ತಜ್ಞರ ವರದಿ ಆಧರಿಸಿ ಗಡಿ ಭಾಗದಲ್ಲಿ ಇರುವಂತೆ ನಗರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.