ಸೇತುವೆ ಇಲ್ಲದೆ ಜನರ ಪರದಾಟ.. ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಪರಿ..
ಮಂಗಳೂರು: ಸೇತುವೆ ಇಲ್ಲದೆ ಜನರ ಪರದಾಟ. ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಪರಿ.. ಒಬ್ಬ ಅಸ್ವಸ್ಥ ಮಹಿಳೆಯ ಜೀವ ಉಳಿಸಲು ಹೋದ ಮತ್ತಷ್ಟು ಮಂದಿ ಪ್ರವಾಹಕ್ಕೆ ಬಲಿಯಾದರೆ ಯಾರು ಹೊಣೆ..? ಇದು ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರತಿನಿಧಿಸುತ್ತಿರುವ ಕ್ಷೇತ್ರದ ದುಸ್ಥಿತಿ. ಸುಮಾರು 30 ವರ್ಷಗಳಿಂದ ಸಚಿವ ಅಂಗಾರ ಅವರು ಶಾಸಕರಾಗಿ ಪ್ರತಿನಿಧಿಸುತ್ತಿರುವ ಸುಳ್ಯ ಕ್ಷೇತ್ರದ ಪರಿಸ್ಥಿತಿ..
ಇಲ್ಲಿದೆ ನೋಡಿ ಮನಕಲಕುವ ವೀಡಿಯೋ
ಈ ಊರ ಜನರ ಈ ಪರಿಸ್ಥಿತಿ ಇಂದು ನಿನ್ನೆಯದಲ್ಲ. ಹೀಗಿದ್ದರೂ ಈ ಬಗ್ಗೆ ಕಣ್ಣಿದ್ದೂ ಕುರುಡರಾದರೇ ಅಧಿಕಾರಿಗಳು.. ಹಲವು ವರ್ಷಗಳ ಸ್ಥತಿ ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದರೇ ಜನ ಪ್ರತಿನಿಧಿಗಳು..? ಇದಕ್ಕೆ ಯಾರು ಹೋಣೆ ಎಂದು ಉತ್ತರಿಸುವವರಾದರೂ ಯಾರು..? ಜನ ಪ್ರತಿನಿಧಿಗಳು ಇನ್ನಾದರೂ ಕಾಳಜಿ ತೋರುವರೇ..? ಅಧಿಕಾರಿಗಳಾದರೂ ಕ್ರಮವಹಿಸುವರೇ..? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋ ಹಳ್ಳಿ ಜನರ ಅಸಹಾಯಕತೆಯ ಪ್ರತಿಬಿಂಬ ಎಂಬಂತಿದೆ. ಈ ದುಸ್ಥಿತಿ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯೇ ದಕ್ಷಿಣಕನ್ನಡಕ್ಕೆ ಬರಬೇಕೇ ಎಂದು ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರೇ ಪ್ರಶ್ನಿಸುತ್ತಿದ್ದಾರೆ.