ಉಡುಪಿ : ಮಾನಸ ಸ್ಟುಡಿಯೋ ಮಾಲಕ , ಹೇರೂರು ಅಶೋಕ್ ಕುಮಾರ್ ಶೆಟ್ಟಿ ಸೋಮವಾರ ಶಿರಾದಲ್ಲಿ ನಡೆದ ಕಾರು ಹಾಗು ಲಾರಿ ಅಪಘಾತದಲ್ಲಿ ಗಾಯಗೊಂಡು, ಜೀವನ್ಮರಣ ಹೋರಾಟದಲ್ಲಿ ಕೊನೆಗೂ ವಿಧಿಯ ಕ್ರೂರ ಆಟಕ್ಕೆ ಬಲಿಯಾದರು.
ಚತುರ ಸಂಘಟಕ, ಮಾತಿನ ಮಲ್ಲ, ಅಶೋಕ್ ಕುಮಾರ್ ಶೆಟ್ಟಿ ಸೌತ್ ಕೆನರಾ ಫೋಟೋ ಗ್ರಾಪರ್ ಅಸೋಸಿಯೇಷನ್ ದಕ ಜಿಲ್ಲೆ ಹಾಗು ಉಡುಪಿ ಜಿಲ್ಲೆಯ ಬೆನ್ನೆಲುಬಾಗಿದ್ದರು. ಸಂಘಟನೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡು ಸಂಘಟನೆಯನ್ನು ಎರಡು ಜಿಲ್ಲೆಯಲ್ಲಿ ಬಲಿಷ್ಠ ಪಡಿಸಲು ಕಾರಣಕರ್ತರಾಗಿದ್ದವರು. ಹಲವು ಕನಸುಗಳನ್ನು ಹೊತ್ತು ಜೀವನವಿಡೀ ಸಂಘಟನೆ, ಸಮಾಜಸೇವೆ ಎಂಬ ದ್ಯೇಯೋ ದ್ದೇಶಗಳಿಂದ ಕಾರ್ಯ ಪ್ರವೃತ್ತರಾಗಿದ್ದವರು. ತನಗೆ ಸರಿ ತೋರದ್ದನ್ನು ನೇರವಾಗಿ ಹೇಳಿ ಬಿಡುವ ಸಾಹಸಿ. ರಾಜಕೀಯದಲ್ಲೂ ಸೈ ಏನಿಸಿ ಕೊಂಡು ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಹಲವಾರು ಸಂಘಟನೆಗಳ ಮೂಲಕ ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಂಡ ಧೀಮಂತ ನಾಯಕ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನಿಕಟವರ್ತಿಯಾಗಿದ್ದ ಅಶೋಕ್ ರವರು skpaಗೆ ರಾಜಕೀಯದಿಂದ ಸಿಗುವ ಸೌಲಭ್ಯವನ್ನು ಸದಸ್ಯರಿಗೆ ಸಿಗುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Skpa ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಹಾಗು ಕಾರ್ಯದರ್ಶಿ ಹರೀಶ್ ಅಡ್ಯಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಕರಾವಳಿ ಜಿಲ್ಲೆಗಳ ಛಾಯಾಗ್ರಾಹಕರ ಅಚ್ಚುಮೆಚ್ಚಿನ ಸಹವರ್ತಿಯಾಗಿದ್ದ ಅಶೋಕ್ ರವರ ನಿಧನಕ್ಕೆ ರಾಜ್ಯದ ಛಾಯಾಗ್ರಹಣ ಕ್ಷೇತ್ರದ ಸರ್ವ ಛಾಯಾಗ್ರಾಹಕರು ವಿಧಿಯ ಆಟಕ್ಕೆ ಕಂಬನಿ ಮಿಡಿದಿದ್ದಾರೆ.