ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿಂದು 2,576 ಕೊರೊನಾ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,37,206 ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಪಾಸಿಟಿವ್ ಕೇಸ್ಗಳ ವಿವರ ಈ ರೀತಿ ಇದೆ.
ಬಾಗಲಕೋಟೆ 08
ಬಳ್ಳಾರಿ 19
ಬೆಳಗಾವಿ 68
ಬೆಂಗಳೂರು ಗ್ರಾಮಾಂತರ 55
ಬೆಂಗಳೂರು ನಗರ 563
ಬೀದರ್ 03
ಚಾಮರಾಜನಗರ 55
ಚಿಕ್ಕಬಳ್ಳಾಪುರ 27
ಚಿಕ್ಕಮಗಳೂರು 83
ಚಿತ್ರದುರ್ಗ 45
ದಕ್ಷಿಣಕನ್ನಡ 263
ದಾವಣಗೆರೆ 81
ಧಾರವಾಡ 28
ಗದಗ 17
ಹಾಸನ 138
ಹಾವೇರಿ 13
ಕಲಬುರಗಿ 04
ಕೊಡಗು 150
ಕೋಲಾರ 79
ಕೊಪ್ಪಳ 55
ಮಂಡ್ಯ 95
ಮೈಸೂರು 282
ರಾಯಚೂರು 09
ರಾಮನಗರ 14
ಶಿವಮೊಗ್ಗ 194
ತುಮಕೂರು 99
ಉಡುಪಿ 71
ಉತ್ತರಕನ್ನಡ 52
ವಿಜಯಪುರ 02
ಯಾದಗಿರಿ 04
ಈ ನಡುವೆ, ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಫಲಿಸದೆ ಇಂದು 93 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಾದ್ಯಂತ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,836 ಕ್ಕೆ ಏರಿಕೆಯಾಗಿದೆ.