ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಬಹಿರಂಗ ಸಮಾವೇಶ ಆಯೋಜಿತವಾಗಿಲ್ಲ. ಹಾಗಾಗಿ ಮನೆಗಳಲ್ಲೇ ಯೋಗಾ ಯೋಗ.

ಮೋದಿಯವರ ಕರೆಯಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು, ಆರೆಸ್ಸೆಸ್ ಸ್ವಯಂಸೇವಕರು, ರಾಜಕೀಯ ಮುಖಂಡರು ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಮನೆಯಲ್ಲೇ ಯೋಗ ದಿನಾಚರಣೆ ಕೈಗೊಂಡರು.
ಯೋಗೇನ ಚಿತ್ತಸ್ಯ ಪದೇನ ವಾಚಾ ||
ಮಲಂ ಶರೀರಸ್ಯಂಚ ವ್ಯೆದ್ಯಕೇನ||
ಯೋಪಾಕರೋತ್ತಂ ಪ್ರವರಂ ಮುನೀನಾಂ||
ಪತಂಜಲಿ ಪ್ರಾಂಜಲಿರಾನತೋಸ್ಮಿ||ಸರ್ವರಿಗೂ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು pic.twitter.com/dojFLWEyN0
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) June 21, 2021
ಶ್ಲೋಕ ಸಹಿತ, ಯೋಗಮಂತ್ರ ಪಠಿಸುತ್ತಾ ಮಾಡಿದ ಕಸರತ್ತು ಕಾರ್ಯಕರ್ತರಿಗೆ ಪ್ರೇರಣೆಯಾದಂತಿತ್ತು. ಸಿ.ಟಿ.ರವಿ ಅವರ ಯೋಗ ವೀಡಿಯೋಗೆ ಟ್ವಿಟ್ಟರ್‌ನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
























































