ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಸರ್ಕಾರ ಲಾಕ್‌ಡೌನ್ ಕಠಿಣ ನಿಯಮ ಜಾರಿಗೊಳಿಸಿದ್ದರಿಂದಾಗಿ ಚಿತ್ರೋದ್ಯಮದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಚಿತ್ರೋದ್ಯಮದ ಕಾರ್ಮಿಕರ ಹಾಗೂ ಕಲಾವಿದರ ನೆರವಿಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಧಾವಿಸಿದೆ.
ಖ್ಯಾತ ಆಹಾರೋದ್ಯಮ ಕ್ಷೇತ್ರದ ದಿಗ್ಗಜ ಗೋವಿಂದ ಬಾಬು ಪೂಜಾರಿ ನೇತೃತ್ವದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಬನಶಂಕರಿ ಬಳಿ ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರು ಹಾಗೂ ಸಿನಿಮಾ ಕ್ಷೇತ್ರವನ್ನು ಅವಲಂಭಿಸಿರುವ ಕುಟುಂಬದ ಸದಸ್ಯರಿಗೆ ಕಿಟ್ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಗಣ್ಯರ ಉಪಸ್ಥಿತಿಯಲ್ಲಿ ಸ್ವತಃ ಗೋವಿಂದ ಬಾಬು ಪೂಜಾರಿ ಅವರೇ ಆಹಾರ, ವೈದ್ಯಕೀಯ ಕಿಟ್‌ಗಳನ್ನು ವಿತರಿಸಿದರು. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರೂ ಈ ಕಾರ್ಯಯದಲ್ಲಿ ಕೈ ಜೋಡಿಸಿದರು.
ಬೆಂಗಳೂರಿನ ಪೌರ ಕಾರ್ಮೀಕರು ಹಾಗೂ ಆಟೋ ಚಾಲಕರಿಗೂ ಇದೇ ಸಂದರ್ಭದಲ್ಲಿ ಫುಡ್ ಕಿಟ್ ವಿತರಿಸಲಾಯಿತು.
ಈ ನಡುವೆ ಉದಯ ನ್ಯೂಸ್ ಜೊತೆ ಮಾತನಾಡಿದ ಗೋವಿಂದ ಬಾಬು ಪೂಜಾರಿ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲ, ಬೆಂಗಳೂರಿನಲ್ಲೂ ನೆರವು ನೀಡುವಂತೆ ಸಂಘ ಸಂಸ್ಥೆಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರದ ಮಂದಿ, ಆಟೋ ಚಾಲಕರು ಹಾಗೂ ಪೌರ ಕಾರ್ಮಿಕರಿಗೆ ಕಿಟ್ ವಿತರಿಸುತ್ತಿರುವುದಾಗಿ ತಿಳಿಸಿದರು.