ನಾಗ್ಪುರ: ದೇಶದ ರಾಷ್ಟ್ರೀಯವಾದಿ ಸೇನೆ ಎಂದೇ ಗುರುತಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ನಾಯಕ ಮೋಹನ್‌ಜೀ ಭಾಗವತ್ ಅವರು ಚೇತರಿಸಿಕೊಂಡಿದ್ದಾರೆ. ‘ಆರೆಸ್ಸೆಸ್ ಸರಸಂಘ ಚಾಲಕ್ ಪರಮಪೂಜನೀಯ ಡಾ.ಮೋಹನ್‌ಜೀ ಭಾಗವತ್ ಅವರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.
ಸೋಂಕಿಗೊಳಗಾಗಿದ್ದ ಮೋಹನ್‌ಜೀ ಭಾಗವತ್ ಅವರನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೆಸ್ಸೆಸ್ ಪ್ರಮುಖರು ತಿಳಿಸಿದ್ದಾರೆ.













































































