ಬೀದರ್: ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಕುರಿತಂತೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮ ಅನುಸರಿಸುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ಮುಷ್ಕರದಿಂದಾಗಿ ಉಂಟಾಗಿರುವ ಬೆಳವಣಿಗೆ ಕುರಿತಂತೆ ಬಸವಕಲ್ಯಾಣದಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸಿಎಂ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು ಎಂದ ಅವರು, ಸಿಎಂ ಆಗಲಿ, ಸಚಿವರಾಗಿ ಯಾರು ಮೇಲಿಂದ ಇಳಿದು ಬಂದಿಲ್ಲ. ಯಾರಿಗೂ ಇದು ಶಾಶ್ವತವಲ್ಲ. ಇವರು ಉದ್ಧಟತನ, ನಡುವಳಿಕೆಗಳಿಂದ ಮುಂದೆ ದೊಡ್ಡ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಾರೆ. ಇಂಥದಕ್ಕೆಲ್ಲಾ ಅವಕಾಶ ಕೊಡಬಾರದು ಎಂದರು.
ಸಾರಿಗೆ ನೌಕರರ ಮನವೊಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ತಪ್ಪಿಸಬೇಕಿರುವುದು ಸರ್ಕಾರದ ಜವಾಬ್ದಾರಿ ಎಂದ ಅವರು, ಮುಷ್ಕರವು ಹಲವು ದಿನ ಮುಂದುವರಿದರೂ ಮಾತುಕತೆಗೆ ಕರೆಯಲ್ಲಾ ಅಂದ್ರೆ ಇವರು ಯಾಕಾಗಿ ವಿಧಾನಸೌಧದಲ್ಲಿ ಇರೋದು ಎಂದು ಪ್ರಶ್ನಿಸಿದ್ದಾರೆ.