ದೆಹಲಿ: ಛತ್ತೀಸ್ ಘಡದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಹುತಾತ್ಮರಾದ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. 400ಕ್ಕೂ ಅಧಿಕ ನಕ್ಸಲರು ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿ ಈ ಭೀಕರತೆ ಮೆರೆದಿದ್ದಾರೆನ್ನಲಾಗಿದೆ.
ಹುತಾತ್ಮ ಯೋದರ ಪೈಕಿ ಸಿಆರ್‌ಪಿಎಫ್‌ನ 8 ಮಂದಿ, ‘ಕೋಬ್ರಾ’ದ ಏಳು ಕಮಾಂಡೊಗಳು, ಬಸ್ತಾರಿಯಾ ತುಕಡಿಯ ಒಬ್ಬ ಯೋಧ ಸೇರಿದ್ದಾರೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ.
ಸಿಆರ್‌ಪಿಎಫ್‌ನ ಜಂಗಲ್ ವಾರ್‌ಫೇರ್ ಯುನಿಟ್ ಕೋಬ್ರಾ, ಬಸ್ತಾರಿಯನ್ ಬೆಟಾಲಿಯನ್, ಛತ್ತೀಸ್ ಘಡ ಪೊಲೀಸ್‌ನ ಜಿಲ್ಲಾ ಮೀಸಲು ಪಡೆ ಸಹಿತ 1,500ರಷ್ಟು ಯೋಧರು ನಕ್ಸಲ್ ವಿರುದ್ಧ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಶಸ್ತ್ರಸಜ್ಜಿತ ನಕ್ಸರು ಈ ದಾಳಿ ನಡೆಸಿ ಭೀಕರ ನರಮೇಧ ನಡೆಸಿದ್ದಾರೆ. ಅಷ್ಟೇ ಅಲ್ಲ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಪಹರಿಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.