ಮಂಗಳೂರು: ಬೇಸಿಗೆಯ ಈ ಸಂದರ್ಭದಲ್ಲೀಗ ಕರಾವಳಿ ಜಿಲ್ಲೆಗಳಲ್ಲಿ ಜಾತ್ರೆಗಳ ಸುಗ್ಗಿ. ತುಳುನಾಡಿನಲ್ಲಿ ಸಾಲು ಸಾಲು ಉತ್ಸವಗಳ ಪರ್ವ. ಅದರಲ್ಲೂ ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ತಿಂಗಳ ಕಾಲದ ಚೆಂಡು ಉತ್ವವ ನೆರವೇರುತ್ತಿದೆ. ಸುದೀರ್ಘ ಕಾಲದ ಈ ಜಾತ್ರೆಯ ಕೈಂಕರ್ಯವನ್ನು ಸಾಕ್ಷೀಕರಿಸಲು ಭಕ್ತಸಾಗರವೇ ಈ ದೇಗುಲಕ್ಕೆ ಹರಿದುಬರುತ್ತಿದೆ.
ಇದೇ ಸಂದರ್ಭದಲ್ಲಿ, ಪೊಳಲಿ ದೇವಾಲಯದ ವರ್ಣಿಸಲಾಗದಷ್ಟು ಚಾಚಿರುವ ವೈಭವ, ಅಲ್ಲಿನ ಸೊಬಗು-ಸೊಗಸನ್ನು ಬಣ್ಣಿಸುವ ಭಕ್ತಿ ಮಹಿಮೆಯ ಹಾಡು ಬಿಡುಗಡೆಯಾಗಿದೆ.
ದೇವಾಲಯದ ಇತಿಹಾಸ, ಮಹಿಮೆ, ವೈಶಿಷ್ಟ್ಯಗಳನ್ನು ವರ್ಣಿಸಿರುವ ಈ ಹಾಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲಾಗದ ಆಸ್ತಿಕರಿಗೆ ದೇವಾಲಯದ ಸೊಬಗನ್ನು ಈ ಹಾಡಿನ ದೃಶ್ಯಗಳು ಸೊಗಸಾಗಿ ತೋರಿಸಿಕೊಟ್ಟಿದೆ.
‘ಪುರಲ್‌ದ ಮೃಣ್ಮಯಿ ಮೂರ್ತಿ’ ಎಂಬ ಹೆಸರಿನ ಈ ಭಕ್ತಿಯ ಹಾಡು ಭದ್ರಾಕ್ಷಿ ಬೆಂಜನಪದವು ಹಾಗೂ ಲಿಖಿತ್ ರಾಜ್ ಪೊಳಲಿ ಅವರ ಮಧುರ ಕಂಠದಲ್ಲಿ ಸೊಗಸಾಗಿ ಮೂಡಿಬಂದಿದೆ. ಗಾಯತ್ರಿ ಸ್ನೇಹಗಿರಿ ಅವರ ಸಾಹಿತ್ಯ ಕೂಡಾ ಗಮನಕೇಂದ್ರೀಕರಿಸಿದೆ.
ಯಶು ಸ್ನೇಹಗಿರಿ, ಸುಜಾತಾ ನಂದ ಕುಮಾರ್, ಅಶೋಕ್ ಮಂಗಳೂರು. ನೀತು ಅಮೀನ್ ಕಲ್ಲಡ್ಕ, ಅಭಿಷೇಕ್ ಕ್ಷತ್ರಿಯ ಬಿ.ಸಿ.ರೋಡು, ಸಂತೋಷ್ ರಾಜ್ ಉಬಾರ್, ಲೋಕೇಶ್ ಚಿತ್ತೇರ, ಅಶ್ವಿನ್ ಪುತ್ತೂರು, ಪುರಂದರ್ N.S. ನಾಗನವಳಚ್ಚಿಲ್ ಇವರ ಪ್ರಯತ್ನದ ಫಲವಾಗಿ ಮೂಡಿಬಂದಿರುವ ಈ ಭಕ್ತಿ ಹಾಡಿಗೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ಮೆಚ್ಚುಗೆ ಸಿಕ್ಕಿವೆ.