ನಾಯಕರದಾವರ ವೈಯಕ್ತಿಕ ಬದುಕು ಪರಿಶುದ್ದವಾಗಿರಬೇಕು.. ಭ್ರಷ್ಟಾಚಾರ ಮುಕ್ತರಾಗಿ ಶುದ್ದಹಸ್ತರಾಗಿರಬೇಕು.. ಜಾರಕಿಹೊಳಿ ಬಗ್ಗೆ ಕೇಂದ್ರ ಸಚಿವರ ಅಸಮಾಧಾನ..
ಹುಬ್ಬಳ್ಳಿ; ಮಿನಿಮಹಾಸಮರ ಸಂದರ್ಭದಲ್ಲೇ ಬಿಜೆಪಿ ಮುಜುಗರದ ಸನ್ನಿವೇಶದ ಸುಳಿಯಲ್ಲಿ ಸಿಲುಕಿದೆ. ಶಿಸ್ತಿಗೆ ಹೆಸರಾಗಿರುವ ಪಕ್ಷದಲ್ಲಿ ಇದೇನು ನಡೆದು ಹೋಯಿತು ಎಂಬ ಚಿಂತೆ ಬಿಜೆಪಿ ನಾಯಕರನ್ನು ಕಾಡತೊಡಗಿದೆ.
ಸಿಡಿ ವಿವಾದ ಕುರಿತಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಿಸ್ತು ಕ್ರಮದ ಸುಳಿವನ್ನು ನೀಡಿದ್ದಾರೆ.
ನಾಯಕರಾದವರ ವೈಯಕ್ತಿಕ ಬದುಕು ಪರಿಶುದ್ದವಾಗಿರಬೇಕು. ಹಾಗೂ ಭ್ರಷ್ಟಾಚಾರ ಮುಕ್ತರಾಗಿ ಶುದ್ದಹಸ್ತರಾಗಿರಬೇಕು ಎಂದು ರಮೇಶ್ ಜಾರಕಿಹೊಳಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮದು ಶಿಸ್ತಿನ ಪಕ್ಷ. ಇದನ್ನೆಲ್ಲಾ ಸಹಿಸಲ್ಲ, ಈ ಬಗ್ಗೆ ಪರೀಶಿಲನೆ ಮಾಡುತ್ತೆವೆ. ತಪ್ಪು ಮಾಡಿದ್ರೆ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜೊತೆಯೂ ಮಾತನಾಡುತ್ತೆನೆ. ದೆಹಲಿಯಲ್ಲೂ ರಾಷ್ಟ್ರ ನಾಯಕರು ಭೆಟಿಯಾಗಿ ಅವರ ಗಮನಕ್ಕೂ ತರುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.