ಹಟ್ಟಿ ತಿಪ್ಪೇಶನ ದೊಡ್ಡ ರಥೋತ್ಸವಕ್ಕೆ ಕೋವಿಡ್ ಕರಿ ನೆರಳು: ರದ್ದಾಯಿತು ಜಾತ್ರಾ ನಾಯಕನಹಟ್ಡಿ ಜಾತ್ರಾ ಮಹೋತ್ಸವ.
ವರದಿ: ಹೆಚ್ ಎಂ ಪಿ ಕುಮಾರ್
ಚಿತ್ರದುರ್ಗ: ಕೋವಿಡ್ ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಹಟ್ಟಿ ತಿಪ್ಪೇಶನ ಜಾತ್ರಾ ಮಹೋತ್ಸವವನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ.
ಗುರುವಾರ ನಾಯಕನಹಟ್ಟಿಯಲ್ಲಿ ಜಿಲ್ಲಾಡಳಿತ ಮಾ.29ರಂದು ನಡೆಯುವ ದೊಡ್ಡ ರಥೋತ್ಸವದ ಪೂರ್ವಭಾವಿ ಸಭೆ ನಡೆಸಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿ ನಾಯಕನಹಟ್ಟಿ ಜನರ ಜಾತ್ರೆ ರದ್ದುಗೊಳಿಸಲಾಗಿದೆ. ದೊಡ್ಡ ರಥೋತ್ಸವ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ರಾಜ್ಯದ ಇತರೆಡೆ ಜಾತ್ರ ಮಹೋತ್ಸವಗಳು ನಡೆಯುತ್ತಿವೆ. ತಿಪ್ಪೇಶನ ಜಾತ್ರೆಗೆ ಏಕೆ ನಿರ್ಬಂಧ ಏರುತ್ತಿದ್ದೀರಾ ಎಂದು ಪ್ರಶ್ನೀಸಿದರು. ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುವ ಕಾರಣ ಕೋವಿಡ್ ನಿಯಮಪಾಲಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಮಾಜದ ಒಳಿತನ ದೃಷ್ಟಿಯಿಂದ ಜಾತ್ರೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮನವರಿಕೆ ಮಾಡಿಕೊಟ್ಟರು.
ಜಾತ್ರೆಯನ್ನು ಮಾತ್ರ ರದ್ದುಗೊಳಿಸಿದ್ದೇವೆ. ಆದರೆ ಜಾತ್ರೆ ವಿಧಿ, ವಿಧಾನ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಸ್ಥಳೀಯರಿಂದ ಮಾತ್ರ ಜಾತ್ರೆ ನಡೆಸಲು ಅವಕಾಶ ನೀಡಲಾಗಿದೆ. ಜತೆಗೆ ಅಂಗಡಿಗಳನ್ನು ಬ್ಯಾನ್ ಮಾಡಲಾಗಿದ್ದು, ಹೊರಗಿನ ವಾಹನಗಳಿಗೆ ಅವಕಾಶ ಇಲ್ಲ. ಇದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಎಸ್ಪಿ ಜಿ.ರಾಧಿಕಾ, ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ ಸಹಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.