ಗದಗ: 17ನೇ ರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಅಂಗವಾಗಿ ಗದಗ್‌ನ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಾಥಾ ನಡೆಯಿತು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂಗಮೇಶ್ ದಂದೂರ ಅವರು ಈ ಜಾಥಾಗೆ ಚಾಲನೆ ನೀಡಿದರು.
ಏಷಿಯನ್ ಸೈಕ್ಲಿಂಗ್ ಕಾನ್ಫಾಡರೇಶನ್ ಸೆಕ್ರೆಟರಿ ಜನರಲ್‍ಗಳಾದ ಓಂಕಾರ ಸಿಂಗ್, ಮುನಿಂದರಪಾಲ್ ಸಿಂಗ್, ರಾಜ್ಯ ಸೈಕ್ಲಿಂಗ್ ಸಂಸ್ಥೆ ಉಪಾಧ್ಯಕ್ಷರಾದ ಚನ್ನಪ್ಪ.ಎಸ್.ಜಗಲಿ, ಜಿ.ವಿ.ಪಾಟೀಲ, ಕಾರ್ಯದರ್ಶಿ ಎಸ್.ಎಂ.ಕುರಣಿ, ಗದಗ ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾದ ರವಿಕುಮಾರ ಮರಲಿಂಗಣ್ಣವರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿ.ಪಂ. ಸಿ.ಇ.ಓ. ಭರತ್ ಎಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವ್ಹಿ.ಸೂರ್ಯಸೇನ್ ಅವರುಗಳು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಅಸುಂಡಿಯ ಕುವೆಂಪು ಮಾದರಿ ಶಾಲೆಯ ವರೆಗೆ ಜರುಗಿದ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಸೈಕಲಿಂಗ್ ಸ್ಪರ್ಧಿಗಳಿಗೆ ಸಾಥ್ ನೀಡಿದರು.