ಶಾಲೆಗಳ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರವಷ್ಟೇ ಅಲ್ಲ, ಪೋಷಕರ ಶ್ರಮವೂ ಇದೆ. ಈ ವಿಚಾರದಲ್ಲಿ ಬೆಳಗಾವಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಮಾನ ಗಮನ ಸೆಳೆದಿದೆ. ಕೊರೋನಾ ಸಂಕಟದ ನಡುವೆಯೂ ವಿದ್ಯಾರ್ಥಿಗಳಿಗೆ ಅಗತ್ಯ ಶಿಕ್ಷಣ ನೀಡಲು ಶಾಲಾ ಆಡಳಿತ ಮಂಡಳಿಯು ಸಂಪನ್ಮೂಲ ಒದಗಿಸಿದರೆ, ಅದರ ಬಳಕೆ ಮೂಲಕ ಮಕ್ಕಳ ಜ್ಞಾನಾರ್ಚನೆಗೆ ಸಕಲ ರೀತಿಯ ಸಹಕಾರದ ಭರವಸೆ ಪೋಷಕರಿಂದ ಸಿಕ್ಕಿದೆ.
ಈ ವಿಶೇಷ ಬೆಳವಣಿಗೆಗೆ ಸಾಕ್ಷಿಯಾಗಿದ್ದು ವಿಶೇಷ ಕಾರ್ಯಾಗಾರ. ಬೆಳಗಾವಿ ನಗರದ ವಂಟಮುರಿ ಕಾಲೊನಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2020-21ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ SDMC ಅಧ್ಯಕ್ಷ ದತ್ತಾ ಬಿಲಾವರ ಉಪಾಧ್ಯಕ್ಷರಾದ ಜೋತಿಕುಮಾರ ಹುಲೆಣ್ಣವರ ಮುಖ್ಯ ಅತಿಥಿಗಳಾಗಿ, ನ್ಯಾಯವಾದಿಗಳಾದ ಆನಂದ ಮಾಜಿ ಅಧ್ಯಕ್ಷರಾದ ಛಬರಿ ಕಾಲೋನಿಯ ಹಿರಿಯರಾದ ವೆಂಕುಸಿಂಗ ಬಾದಾಮಿ ಕಾಂಟ್ಯಾಕ್ಟ್ ಮಾರುತಿ ರಂಗಾಪೂರಿ, ಪತ್ರಕರ್ತ ದೀಪಕ ಕೋರ್ಡೆ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಶೋಭಾ ಹಿರೇಮಠ CRP ಮಹಾಂತೇಶ ನಗರ ಶಾಲೆಯ ಪ್ರಧಾನ ಗುರುಗಳಾದಎಸ್ ಟಿ ಕೋಲಕಾರ ಮೊದಲಾದವರು ಮಾತನಾಡಿ ಶಾಲೆಗಳು ಎದುರಿಸುತ್ತಿರುವ ಸವಾಲು ಹಾಗೂ ಅದಕ್ಕೆ ಅಗತ್ಯವಿರುವ ಪರಿಹಾರದ ಬಗ್ಗೆ ಬೆಳಕು ಚೆಲ್ಲಿದರು. ವಿ.ಬಿ.ಬೀಡಿಕಿ, ಎಸ್ ಟಿ ಕೋಲಕಾರ ಮೊದಲಾದ ಗಣ್ಯರು ಮಾತನಾಡಿದರು.