ದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರಾತ್ರಿಯ ಲಘು ಭೂಕಂಪನ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ನಡುಗಿದೆ. ದೆಹಲಿ, ಅಮೃತಸರ ಸಹಿತ ದೆಹಲಿ ಸುತ್ತಮುತಗತಲ ರಾಜ್ಯಗಳ ಹಲವೆಡೆ ಭೂಮಿ ಕಙಪಿಸಿದ ಅನುಭವವಾಗಿದೆ.
ಪಂಜಾಬ್, ದೆಹಲಿ, ಕಾಶ್ಮೀರ ಕಣಿವೆ, ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ರಾತ್ರಿ 10.34ರ ವೇಳೆ ಭೂಮಿ ಕಂಪಿಸಿದೆ. ತಜಕಿಸ್ಥಾನವು ಈ ಕಂನದ ಕೇಂದ್ರಬಿಂದುವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.3ರಷ್ಟು ದಾಖಲಾಗಿದೆ ಎನ್ನಲಾಗಿದೆ. ಉತ್ತರಭಾರತದಲ್ಲಿ ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.1ರಷ್ಟಿತ್ತು ಎಂದುು ಹೇಳಲಾಗುತ್ತಿದೆ.