ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸನ್ನು ಒಡೆಯುವ ಕುತಂತ್ರ ನಡೆಸುತ್ತಿದೆ ಎಂದು ಮಾಜಿ ಶಾಸಕ ರಮೇಶ್ ಬಾಬು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರ ಬಗ್ಗೆ ಸರಣಿ ಟ್ವೀಟ್ ಮಾಡಿ ಆರೋಪಗಳ ಸುರಿಮಳೆಗೈದಿರುವ ಕೆಪಿಸಿಸಿ ವಕ್ತಾರರೂ ಆದ ರಮೇಶ್ ಬಾಬು, ಮೀಸಲಾತಿ ಹೆಸರಲ್ಲಿ ಜಾತಿರಾಜಕಾರಣ ಮಾಡಲು ಹೋಗಿ ಅಂಡು ಸುಟ್ಟುಕೊಂಡಿರುವ ರಾಜ್ಯ ಬಿಜೆಪಿ ಸಿದ್ದರಾಮಯ್ಯ-ಡಿಕೆಶಿ ನಡುವೆ ಕಂದಕ ತೋಡುವ ಆಸೆಗೆ ಬಿದ್ದಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. .
ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವ BJP ತನ್ನ ಪಕ್ಷದ ಶಾಸಕರ, ಸ್ವಾಮೀಜಿಗಳ ಹೇಳಿಕೆಗಳ ತಡೆಯಲಾಗದೆ ಪರದಾಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಗೆ ಪಾಪ ಸಿದ್ದರಾಮಯ್ಯ ಹೆಸರೇ ಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮೀಸಲಾತಿ ಹೆಸರಲ್ಲಿ ಜಾತಿರಾಜಕಾರಣ ಮಾಡಲು ಹೋಗಿ ಅಂಡು ಸುಟ್ಟುಕೊಂಡಿರುವ ರಾಜ್ಯ ಬಿಜೆಪಿ ಸಿದ್ದರಾಮಯ್ಯ-ಡಿಕೆಶಿ ನಡುವೆ ಕಂದಕ ತೋಡುವ ಆಸೆಗೆ ಬಿದ್ದಿದೆ
ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವ BJP ತನ್ನ ಪಕ್ಷದ ಶಾಸಕರ,ಸ್ವಾಮೀಜಿಗಳ ಹೇಳಿಕೆಗಳ ತಡೆಯಲಾಗದೆ ಪರದಾಡುತ್ತಿದೆ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಗೆ ಪಾಪ ಸಿದ್ದರಾಮಯ್ಯ ಹೆಸರೇ ಬೇಕು!
— Ramesh Babu (@rameshbabuexmlc) February 12, 2021
ರಾಜ್ಯ ಸರ್ಕಾರದ ವಿರುದ್ಧ ಅದೇ ಪಕ್ಷದ ಸಚಿವರು ಬೀದಿ ಹೋರಾಟ ಮಾಡುತ್ತಾರೆ. ಕಾಂಗ್ರೆಸ್‌ಗ ಹೆದರಿ ಬಿಜೆಪಿ ‘ಬಿ’ ಟೀಮ್ ಜೊತೆ ಕೈ ಜೋಡಿಸುತ್ತಾರೆ.
ಹಿಂದೆ ಕಾಂಗ್ರೆಸ್ ಟೀಕೆ ಮಾಡಿದ್ದ ಬಿಜೆಪಿ ತನಗೆ ದೊಡ್ಡ ಸಂಖ್ಯೆ ಇದ್ದರೂ ‘ಬಿ’ ಟೀಂಗೆ ಸಭಾಪತಿ ಸ್ಥಾನ ಧಾರೆ ಎರೆಯುತ್ತಾರೆ. ಪ್ರತಿಫಲವಾಗಿ ‘ಬಿ’ ಟೀಮ್ ಉಪಚುನಾವಣೆಗಳಲ್ಲಿ ನಿಲ್ಲದಿರುವ ಘೋಷಣೆಗೆ ಶರಣಾಗಿದೆ ರಮೇಶ್ ಬಾಬು ಅವರು ಟ್ವೀಟ್ ಮೂಲಕ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ.
ಭಂಡ BJP ರಾಜ್ಯ ಸರ್ಕಾರದ ವಿರುದ್ಧ ಅದೇ ಪಕ್ಷದ ಸಚಿವರು ಬೀದಿ ಹೋರಾಟ ಮಾಡುತ್ತಾರೆ BJP ಕಾಂಗ್ರೆಸ್ಗೆ ಹೆದರಿ Bಟೀಮ್ ಜೊತೆ ಕೈ ಜೋಡಿಸುತ್ತಾರೆ
ಹಿಂದೆ ಕಾಂಗ್ರೆಸ್ ಟೀಕೆ ಮಾಡಿದ್ದ ಬಿಜೆಪಿ ತನಗೆ ದೊಡ್ಡ ಸಂಖ್ಯೆ ಇದ್ದರೂ Bಟೀಂಗೆ ಸಭಾಪತಿ ಸ್ಥಾನ ಧಾರೆ ಎರೆಯುತ್ತಾರೆ.ಪ್ರತಿಫಲವಾಗಿ B ಟೀಮ್ ಉಪಚುನಾವಣೆಗಳಲ್ಲಿ ನಿಲ್ಲದಿರುವ ಘೋಷಣೆಗೆ ಶರಣಾಗಿದೆ— Ramesh Babu (@rameshbabuexmlc) February 12, 2021
ರಾಜ್ಯ ಬಿಜೆಪಿ ಹುಳುಕು ಮುಚ್ಚಿ ಜನರ ಗಮನ ಬೇರೆಡೆ ಸೆಳೆಯಲು ಸಿದ್ದರಾಮಯ್ಯ-ಡಿಕೆಶಿ ಮೇಲೆ ಟೀಕೆ ಮಾಡುತ್ತಿದೆ ಎಂದು ವ್ಯಾಖ್ಯಾನ ಮಾಡಿರುವ ರಮೇಶ್‌ಬಾಬು, ಮೊದಲು ನಿಮ್ಮ ಪಕ್ಷ ಮತ್ತು ಮುಖ್ಯಮಂತ್ರಿ ಮೇಲೆ ಬಹಿರಂಗವಾಗಿ ಹರಿಹಾಯುವ ಶಾಸಕರ ನಿಯಂತ್ರಿಸಿ.ಜಾಮೀನಿನ ಮೇಲೆ ಇರುವ ಮುಖ್ಯಮಂತ್ರಿ ಅನಿವಾರ್ಯತೆ ಕಾರಣ ಜನರಿಗೆ ನೀಡಿ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ನಿರ್ಧರಿಸಲು ಸಮರ್ಥವಿದೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಹುಳುಕು ಮುಚ್ಚಿ ಜನರ ಗಮನ ಬೇರೆಡೆ ಸೆಳೆಯಲು ಸಿದ್ದರಾಮಯ್ಯ-ಡಿಕೆಶಿ ಮೇಲೆ ಟೀಕೆ ಮಾಡುತ್ತಿದೆ
ಮೊದಲು ನಿಮ್ಮ ಪಕ್ಷ ಮತ್ತು ಮುಖ್ಯಮಂತ್ರಿ ಮೇಲೆ ಬಹಿರಂಗವಾಗಿ ಹರಿಹಾಯುವ ಶಾಸಕರ ನಿಯಂತ್ರಿಸಿ.ಜಾಮೀನಿನ ಮೇಲೆ ಇರುವ ಮುಖ್ಯಮಂತ್ರಿ ಅನಿವಾರ್ಯತೆ ಕಾರಣ ಜನರಿಗೆ ನೀಡಿ.
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ನಿರ್ಧರಿಸಲು ಸಮರ್ಥವಿದೆ— Ramesh Babu (@rameshbabuexmlc) February 12, 2021