ಬೆಂಗಳೂರ: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್’ಡಿಎ) ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣ ಸಂಬಂಧ ಬೆಂಗಳೂರಿನ ಸಿಸಿಬಿ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಮುಖ್ಯ ಸೂತ್ರಧಾರ ಚಂದ್ರು, ರಾಚಪ್ಪ ಅವರನ್ನು ವಿಚಾರಣೆಗೆ ಗುರಿಪಡಿಸಿರುವ ಸಿಸಿಬಿ ಪೊಲೀಸರು ಈ ವರೆಗೆ 14 ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ನೀಡಿರುವ ಮಾಹಿತಿ ಆಧರಿಸಿ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಧಿಕಾರಿಯೇ ಕಿಂಗ್ ಪಿನ್?
ಕೆಪಿಎಸ್ಸಿ ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್’ಡಿಎ) ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ರಾಜ್ಯ ಸರ್ಕಾರಕ್ಕೂ ಮುಜುಗರದ ಪ್ರಸಂಗ. ಹಾಗಾಗಿ ಸರ್ಕಾರ ಸಮಗ್ರ ತನಿಖೆಗೆ ಸೂಚಿಸಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಕೈವಾಡವಿರಬಹುದೇ ಎಂಬ ಸಂಶಯವೂ ಸಿಸಿಬಿ ಪೊಲೀಸರನ್ನು ಕಾಯ್ದೆ. ಆರೋಪಿಗಳ ಹೆಜ್ಜೆ ಗುರುತು ಬೆನ್ನತ್ತಿದ ಪೊಲೀಸರು ಕಿಂಗ್ ಪಿನ್ ಯಾರೆಂಬುದನ್ನು ಪತ್ತೆಮಾಡಿದ್ದಾರೆನ್ನಲಾಗಿದೆ. ಆದರೆ ತನಿಖಾ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಅಧಿಕಾರಿಯ ಹೆಸರನ್ನು ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಅಧಿಕಾರಿಮ್ ಮೂಲಕವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗಿದ್ದು, ಅಲ್ಲಿಂದ ಆರೋಪಿ ಚಂದ್ರುಗೆ ಅದು ಹಸ್ತಾಂತರವಾಗಿದೆ ಎನ್ನಲಾಗಿದೆ.