ಊರುಗಳ ಹೆಸರನ್ನು, ನಗರಗಳ ಹೆಸರನ್ನು ನಮ್ಮ ಇತಿಹಾಸಗಳಿಗೆ ತಕ್ಕಂತೆ ಮರುನಾಮಕರಣ ಮಾಡಿದ್ದುಂಟು. ಇದೀಗ ಹಣ್ಣುಗಳ ಹೆಸರನ್ನೂ ಬದಲಾಯಿಸುವ ಪ್ರಯತ್ನ ನಡೆದಿದೆ. ಕುತೂಹಲಕಾರಿ ತೀರ್ಮಾನವೊಂದರಲ್ಲಿ ಡ್ರ್ಯಾಗನ್ ಫ್ರೂಟ್ ಹೆಸರನ್ನು ಕಮಲಂ ಎಂದು ಬದಲಾಯಿಸಲಾಗಿದೆ. ಗುಜರಾತ್ ನ ಸರ್ಕಾರ ಈ ಮರುನಾಮಕರಣ ಮಾಡಲು ಮುಂದಾಗಿದೆ.
ಡ್ರ್ಯಾಗನ್ ಚೀನಾಕ್ಕೆ ಬಲು ಪ್ರೀಯ ಹೆಸರು. ಇತ್ತೀಚಿನ ದಿನಗಳಲ್ಲಿ ಚೀನಾವನ್ನು ಸಾಂಪ್ರದಾಯಿಕ ಎದುರಾಳಿ ಎಂದೇ ಭಾವಿಸಲಾಗುತ್ತಿದ್ದು ಅನೇಕ ವಿಚಾರಗಳಲ್ಲಿ ಆ ದೇಶವನ್ನು ಭಾರತೀಯರು ವಿರೋಧಿಸುತ್ತಲೇ ಇದ್ದಾರೆ. ಅದೇ ಸಂದರ್ಭದಲ್ಲಿ ಹಣ್ಣಿನ ಹೆಸರನ್ನೂ ಚೀನೀ ಪದದ ಬದಲಾಗಿ ಸ್ವದೇಶಿ ಹೂವಿನ ಹೆಸರನ್ನು ಇಡಲಾಗಿದೆ.
ಈ ಹಣ್ಣಿನ ಹೊರ ಭಾಗ ಕಮಲದ ಆಕೃತಿಯನ್ನು ಹೋಲುತ್ತದೆ ಆದ್ದರಿಂದ ಅದಕ್ಕೆ ಕಮಲಮ್ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡಲಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ಹೇಳಿದ್ದಾರೆ.