ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಸರ್ಕಾರ ನಡೆಸಿರುವ ಹಲವು ಸುತ್ತುಗಳ ಸಂಧಾನ ವಿಫಲವಾದ ನಂತರ ವಿವಿಧ ಸಂಘಟನೆಗಳು ಮಂಗಳವಾರದಂದು ಭಾರತ್ ಬಂದ್’ಗೆ ಕರೆ ನೀಡಿವೆ. ಈ ಬಂದ್ ಕರೆಯನ್ನು ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲಿಸುವುದಾಗಿ ಹೇಳಿವೆ.
ಈ ನಡುವೆ ಹೆದ್ದಾರಿ ಬಂದ್ ನಡೆಸುವುದಾಗಿ ಕೆಲವು ಸಂಘಟನೆಗಳು ಹೇಳಿವೆ. ಆದರೆ ಎಪಿಎಂಸಿ ಮಾರುಕಟ್ಟೆ ಹಾಗೂ ಬಹುತೇಕ ಕೈಗಾರಿಕೆಗಳು ಸಂಘಗಳು ಬಂದ್ ಮಾಡುವುದಿಲ್ಲ ಎಂದು ಹೇಳಿವೆ. ಬಂದ್ ಮಾಡದೆ ನೈತಿಕ ಬೆಂಬಲವನ್ನಷ್ಟೇ ನೀಡುವುದಾಗಿ ಕರ್ನಾಟಕದ ಹಲವು ಸಂಘಟನೆಗಳು ಹೇಳಿವೆ.
ಇನ್ನೊಂದೆಡೆ, ದೇಶದ ಅನ್ನದಾತರು ಡಿಸೆಂಬರ್ 8ಕ್ಕೆ ಬಂದ್ ಗೆ ಕರೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಂದ್ ಗೆ ಬೆಂಬಲ ನೀಡಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಶಾಸಕರು, ನಾಯಕರು ರಸ್ತೆಗಿಳಿದು ಕೇಂದ್ರದ ಮೂರು ಕರಾಳ ಕಾಯ್ದೆಗಳ ವಿರುದ್ದ ಹೋರಾಟ ಮಾಡಬೇಕು ಎಂದು ಸುರ್ಜೇವಾಲಾ ಕರೆ ನೀಡಿದರು.