ಬೆಂಗಳೂರು:ರಾಜ್ಯಸಭೆಯಲ್ಲಿ ಕನ್ನಡಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಕನ್ನಡದ ಅಸ್ಮಿತೆಯನ್ನು ಪ್ರತಿಪಾದಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಮ್. .ರಮೇಶ್ ಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹಿಂದಿ ಹೇರಿಕೆಗೆ ಗುದ್ದು ನೀಡಿದ್ದಾರೆ ಇಂದು ರಮೇಶ್ ಗೌಡ ಪ್ರತಿಪಾದಿಸಿದ್ದಾರೆ.
ನಾಡು-ನುಡಿ ಗಡಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ರುಜುವಾತು ಪಡಿಸಿದ ದೇವೇಗೌಡರ ನಿಲುವು ಎಲ್ಲ ರಾಜಕಾರಣಿಗಳಿಗೂ ಮಾದರಿ ಎಂದು ರಮೇಶ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.