ಲಂಡನ್: ಆಂಗ್ಲರ ನಾಡು ಲಂಡನ್ ಇದೀಗ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಸಡಗರದಲ್ಲಿದೆ. ಏಪ್ರಿಲ್ 30ರಂದು ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಯ ಸ್ಥಳದಲ್ಲೇ ಬಸವೇಶ್ವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಬ್ರಿಟೀಷ್ ಕನ್ನಡಿಗರ ನಡುವಿನ ಭಾರತ ವೈಭವಕ್ಕೆ ಸಾಕ್ಷಿಯಾಗಲಿದೆ ಎಂದು ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಹೇಳಿದ್ದಾರೆ.
’30ನೇ ಏಪ್ರಿಲ್ 2025 ರಂದು ಮಧ್ಯಾಹ್ನ 12:00 ಗಂಟೆಗೆ, ನಾವು ಲಂಡನ್‌ನಲ್ಲಿ ಭಗವಾನ್ ಬಸವೇಶ್ವರರ 891 ನೇ ಜನ್ಮದಿನವನ್ನು ಆಚರಿಸುತ್ತೇವೆ. ಈ ಸಮಾರಂಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನರ್ ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
UK ಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಶ್ರಮಿಸುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬ್ರಿಟಿಷ್ ಕನ್ನಡ ಸಮೂಹದ ಪ್ರಮುಖರ ಸಮಾಗಮವಾಗಲಿದೆ. ಇದು ಅನನ್ಯ ಹಾಗೂ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ ಎಂದವರು ಹೇಳಿದ್ದಾರೆ.
ಬಸವೇಶ್ವರ ಸ್ಮಾರಕಕ್ಕೆ ಭೇಟಿ ನೀಡಲು ಮತ್ತು ಬಸವೇಶ್ವರ ದೇವರಿಗೆ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಗಣ್ಯರಿಗಾಗಿ ವಿಶೇಷ ಊಟೋಪಚಾರ ಸತ್ಕಾರವೂ ಏರ್ಪಡಿಸಲಾಗಿದ್ದು ಈ ಸಂಬಂಧ ತಯಾರಿ ಸಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.