ಮುಂಬೈ: ‘‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’’ ಧಾರಾವಾಹಿಯ ಹೊಸ ಆವೃತ್ತಿಗೆ ನಟಿ ಸ್ಮೃತಿ ಇರಾನಿ ಮತ್ತೆ ನಟನೆಯೆಡೆಗೆ ಮುಖ ಮಾಡುತ್ತಿದ್ದಾರೆ ಎಂಬ ಹಿನ್ನಲೆಯಲ್ಲಿ ಅವರು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದಾರೆ ಎಂಬ ವದಂತಿಗಳಿಗೆ ಇದೀಗ ಉತ್ತರ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಹಳೆಯ ಟ್ವಿಟರ್) ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ‘’ಕ್ಯಾಬಿನೆಟ್ ಸಚಿವೆಯಾಗಿ ಜವಾಬ್ದಾರಿ ಹೊತ್ತಿದ್ದು ಜೊತೆಗೆ ಕಳೆದ 25 ವರ್ಷಗಳಲ್ಲಿ ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ನನ್ನ ಸಂಘಟನಾ ಜವಾಬ್ದಾರಿಗಳಲ್ಲಿ ಎಂದಿಗೂ ರಾಜಿ ಆಗಿಲ್ಲ, ಆಗಲೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಇದು ಅವರ ರಾಜಕೀಯದಿಂದ ತಾತ್ಕಾಲಿಕ ದೂರವಾಗುವುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ ಯೂಸರ್‌ಗಳಿಗೆ ಉತ್ತರ ಎಂಬಂತಿದೆ.
ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, ‘ಕಿರುತೆರೆಗೆ ನಿಮ್ಮ ಮರಳುವ ನಿರ್ಧಾರವನ್ನು ಗೌರವಿಸುತ್ತೇವೆ. ಆದರೆ ಬಂಗಾಳ ಹಾಗೂ ಉತ್ತರ ಪ್ರದೇಶದ ಪ್ರಮುಖ ಚುನಾವಣೆಗಳು ಹತ್ತಿರವಾಗಿರುವಾಗ ನಿಮ್ಮ ಸಕ್ರಿಯ ರಾಜಕೀಯ ನಡೆ ಅಗತ್ಯ. ಆದರೂ ಕೂಡಾ ನೀವು ನಟಿಸುವ ಸುದ್ದಿ ಕೇಳಿದ ನನ್ನ ತಾಯಿ ತುಂಬಾ ಖುಷಿಪಟ್ಟರು,’’ ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ, ‘‘ನಿಮ್ಮ ತಾಯಿಗೆ ನನ್ನ ಪ್ರಣಾಮಗಳು. ಸಂಘಟನೆಯ ನಿರ್ದೇಶನದಂತೆ ಮುಂಬರುವ ಚುನಾವಣೆಯಲ್ಲಿ ನಾನು ಸಕ್ರಿಯವಾಗಿರುವುದು ಖಚಿತ,’’ ಎಂದು ಸ್ಪಷ್ಟನೆ ನೀಡಿದ್ದಾರೆ.
ಧಾರಾವಾಹಿಗೆ ಮರಳಿ: ಸಂವಿಧಾನಾತ್ಮಕ ನೆನೆಪು
ಕಳೆದ ದಿನಗಳಲ್ಲಿ, ‘‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’’ ಧಾರಾವಾಹಿಯ ಹೊಸ ಆವೃತ್ತಿಗೆ ಸ್ಮೃತಿ ಇರಾನಿ ಮತ್ತೆ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಮಾತನಾಡಿದ ಅವರು, ‘‘ಇದು ಕೇವಲ ಒಂದು ಪಾತ್ರಕ್ಕೆ ಮರಳುವ ವಿಷಯವಲ್ಲ. ಇದು ನನ್ನ ಜೀವನವನ್ನೇ ರೂಪಿಸಿದ ಕಥೆಯೊಂದರತ್ತ ಮತ್ತೆ ಹಿಂದಿರುಗುವ ಹಾದಿ’’ ಎಂದಿದ್ದಾರೆ.
‘‘ಈ ಧಾರಾವಾಹಿಯು ನನಗೆ ಕೇವಲ ವಾಣಿಜ್ಯ ಯಶಸ್ಸನ್ನು ನೀಡಿಲ್ಲ, ಲಕ್ಷಾಂತರ ಮನೆಗಳೊಂದಿಗಿನ ಭಾವನಾತ್ಮಕ ನಂಟನ್ನು ನೀಡಿತು. ಇದೊಂದು ಪೀಳಿಗೆಗೆ ಕನೆಕ್ಷನ್ ಆಗುವ ಪರಿಕಲ್ಪನೆ ನೀಡಿತು’’ ಎಂದು ನೆನಪಿಸಿಕೊಂಡಿದ್ದಾರೆ.
ಈ ಧಾರಾವಾಹಿಯ ಹೊಸ ಆವೃತ್ತಿ ಜುಲೈ 29ರಿಂದ ಸ್ಟಾರ್ ಪ್ಲಸ್ ಹಾಗೂ ಜಿಯೋಸಿನೆಮಾದಲ್ಲಿ ಪ್ರಸಾರವಾಗಲಿದೆ.