ಯೆಮೆನ್‌ನ ತೈಜ್ ನಗರದಲ್ಲಿ, ಅಪರಿಚಿತ ಬಂದೂಕುಧಾರಿಗಳು ಅಟ್ಟಹಾಸ ಮೆರೆದಿದ್ದಾರೆ. ತೈಜ್‌ನ ದಕ್ಷಿಣದ ತುರ್ಬಾ ಪ್ರದೇಶದಲ್ಲಿ ವಿಶ್ವಸಂಸ್ಥೆಯ ಉದ್ಯೋಗಿಯನ್ನು ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ.
ತೈಜ್‌ನಲ್ಲಿ ವಿಶ್ವ ಆಹಾರ ಕಾರ್ಯಕ್ರಮದ (WFP) ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿ ಸುತ್ತಿದ್ದ ಜೋರ್ಡಾನ್ ಪ್ರಜೆ ಕರ್ತವ್ಯದಲ್ಲಿದ್ದಾಗ ಮೋಟಾರು ಸೈಕಲ್‌ನಲ್ಲಿ ಅವರನ್ನು ಹೊಂಚುಹಾಕಿದ್ದ ಹಂತಕರು ಗುಂಡುಗಳ ಸುರಿಮಳೆಗೈಡಿದ್ದಾರೆ.
ವಿಶ್ವ ಆಹಾರ ಕಾರ್ಯಕ್ರಮವು ಯೆಮೆನ್‌ನಂತಹ ಬಿಕ್ಕಟ್ಟು-ಪೀಡಿತ ಪ್ರದೇಶಗಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಲು ಮೀಸಲಾಗಿರುವ ನಿರ್ಣಾಯಕ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಮೌಲ್ಯಯುತ ಸಿಬ್ಬಂದಿ ಸದಸ್ಯರ ನಷ್ಟವು ಸಂಘರ್ಷ ವಲಯಗಳಲ್ಲಿ ಮಾನವೀಯ ಕೆಲಸದಲ್ಲಿ ತೊಡಗಿರುವವರು ಎದುರಿಸುತ್ತಿರುವ ಅಪಾಯಗಳು ಯಾವ ರೀತಿಯಲ್ಲಿವೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಬಂದೂಕುಧಾರಿಗಳ ಗುರುತು ಮತ್ತು ಉದ್ದೇಶಗಳು ಬಹಿರಂಗವಾಗಿಲ್ಲ. ಯೆಮೆನ್ ಪಡೆಗಳು ಘಟನೆಯ ಬಗ್ಗೆ ತನಿಖೆ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.