ಉತ್ತರ ಪ್ರದೇಶದ ಕೊರೊನಾಕ್ಕೆ ಮೊದಲ ಬಲಿಯಾಗಿದೆ. 25 ವರ್ಷದ ಯುವಕ ಗೋರಖ್ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಈತನಿಗೆ ಕೊರೊನಾ ಸೋಂಕಿರುವುದು ಗೊತ್ತಾಗಲಿಲ್ಲ. ಮರಣೋತ್ತರ ಪರೀಕ್ಷೆ ನಂತ್ರ ಸೋಂಕಿರುವುದು ದೃಢಪಟ್ಟಿದೆ.
ಮಾರ್ಚ್ 28 ರಂದು ಯುವಕನನ್ನು ಬಸ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 29 ರಂದು ಗೋರಖ್ಪುರದ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿತ್ತು. ಇಲ್ಲಿ ಯುವಕ ಚಿಕಿತ್ಸೆ ಪಡೆಯುತ್ತಿದ್ದ. ಮಾರ್ಚ್ 30 ರಂದು ಬೆಳಿಗ್ಗೆ 8 ಗಂಟೆಗೆ ಆತ ಸಾವನ್ನಪ್ಪಿದ್ದಾನೆ.
ಯುವಕನ ಅಂತ್ಯಕ್ರಿಯೆ ನಂತ್ರ ವರದಿ ಬಂದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಯುವಕನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಲಾಗಿದೆ.