ಈ ಭೂಮಿಗೆ ಕಾದಿದೆಯಾ ಕಂಟಕ? 2020 ಸರ್ವನಾಶ ಅನ್ನೋ ಭವಿಷ್ಯ ನಿಜವಾಗಲಿದೆಯಾ? ಈ ಅನುಮಾನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಭೀಕರ ಅಗ್ನಿ ನರ್ತನದಿಂದಾಗಿ ಬಲವಾಗಿ ಕಾಡಲಾರಂಭಿಸಿದೆ. ಕಳೆದ 5 ದಿನಗಳಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹಬ್ಬಿರೋ ಬೆಂಕಿ ಜ್ವಾಲೆ 50 ಕೋಟಿಗೂ ಅಧಿಕ ಪ್ರಾಣಿ ಪಕ್ಷಿಗಳು ಹಾಗೂ ಗಿಡ ಮರಗಳನ್ನು ಆಹುತಿ ತೆಗೆದುಕೊಂಡಿದೆ.
ಪ್ರಾಣಿಗಳ ಮಾರಣಹೋಮ ಕಣ್ಣೀರು ತರಿಸುವಂತಿದೆ. 50 ಕೋಟಿ ವನ್ಯಜೀವಿ, ವನಸಂಪತ್ತು ಮಾತ್ರವಲ್ಲ 17 ಮಂದಿ ಜೀವವನ್ನೂ ಕಳೆದುಕೊಂಡಿದ್ದಾರೆ. ಅಗ್ನಿ ಜ್ವಾಲೆಗೆ 12.35 ಮಿಲಿಯನ್ ಎಕರೆ ಭೂಮಿ ಸುಟ್ಟು ಕರಕಲಾಗಿದೆ. ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಜನವರಿ -ಫೆಬ್ರವರಿಯಲ್ಲಿ ಸಿಡ್ನಿಯಲ್ಲಿ ಅತಿಯಾದ ಬಿಸಿಲು ಕಂಡುಬರುತ್ತೆ. ಈ ಬಾರಿ ತಾಪಮಾನ ಹೆಚ್ಚಾಗಿ ಉದ್ದಗಲಕ್ಕೂ ಹರಡಿಕೊಂಡಿರುವ ಕಾಡಿನ ಬೆಂಕಿ ಆವರಿಸಿದ್ದು; ಲಕ್ಷಾಂತರ ಪ್ರಾಣಿ, ಪಕ್ಷಿಗಳು ಸುಟ್ಟು ಕರಕಲಾಗಿದೆ.ಇನ್ನು ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಮೂಕಪ್ರಾಣಿಗಳು ಓಡುತ್ತಿರುವ ದೃಶ್ಯ ಅರಚುತ್ತಿರುವ ಚಿತ್ರಣ ಮರುಕ ಹುಟ್ಟಿಸುವಂತಿದೆ.
ಅಂದಹಾಗೆ ಕಳೆದ ಹಲವು ತಿಂಗಳಿಂದ ಕಾಂಗರೂ ನಾಡಿನಲ್ಲಿ ಇಂಥಹ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಿದ್ದು , ಎರಡು ದಿವಸಗಳ ನಂತರ ಇದೀಗ ಕೊನೆಗೂ ವರಣ ದೇವ ಕಣ್ಣು ತೆರೆದಿದ್ದು ಮಳೆ ಸುರಿದಿದೆ.. ಇದರಿಂದ ಕೊಂಚ ಮಟ್ಟಿಗೆ ಆಸ್ಟ್ರೇಲಿಯಾ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.