ಬೆಂಗಳೂರು: ಆರು ತಿಂಗಳಾದರೂ ರಾಜ್ಯ ಸರ್ಕಾರ 14 ಅಕಾಡೆಮಿ, 4 ಪ್ರಾಧಿಕಾರಗಳಿಗೆ ಮುಖ್ಯಸ್ಥರನ್ನೇ ನೇಮಕ ಮಾಡದಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ. ರಾಜ್ಯ ಸರ್ಕಾರವನ್ನು ಕನ್ನಡ ಮತ್ತು ಸಂಸ್ಕೃತಿಯ ವಿರೋಧಿ ಎಂದು ಬಣ್ಣಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ 14 ಅಕಾಡೆಮಿ, 4 ಪ್ರಾಧಿಕಾರಗಳಿಗೆ ಮುಖ್ಯಸ್ಥರನ್ನೇ ನೇಮಕ ಮಾಡಿಲ್ಲ. ಕನ್ನಡ ಮತ್ತು ಸಂಸ್ಕೃತಿ ಪರ ಕೆಲಸ ಮಾಡಲು ಮುಖ್ಯಸ್ಥರುಗಳೇ ಇಲ್ಲದೆ ಪ್ರಾಧಿಕಾರಗಳು ನಿಸ್ತೇಜಗೊಂಡಿವೆ ಎಂದು ಆರೋಪಿಸಿದೆ.
ಕನ್ನಡವನ್ನು ಟಿಪ್ಪುವಿನಂತೆ ಅಳಿಸಿ ಹಾಕಲು ಪಣತೊಟ್ಟಂತೆ ಇರುವುದೇ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣ ಎಂದು ಟೀಕಿಸಿರುವ ಬಿಜೆಪಿ, ಜನರ ತೆರಿಗೆ ದುಡ್ಡಿನಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಬಿಟ್ಟಿ ಪ್ರಚಾರ ಪಡೆಯುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪ್ರಾಧಿಕಾರಗಳ ಮುಖ್ಯಸ್ಥರ ನೇಮಕಾತಿಗೆ ಹಣದ ಕೊರತೆಯನ್ನು ಮುಂದಿಡುತ್ತಿರುವುದು ನಾಚಿಕೆಗೇಡು ಎಂದು ಚಾಟಿ ಬೀಸಿದೆ.
ಕನ್ನಡ ಮತ್ತು ಸಂಸ್ಕೃತಿಯ ವಿರೋಧಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ 14 ಅಕಾಡೆಮಿ, 4 ಪ್ರಾಧಿಕಾರಗಳಿಗೆ ಮುಖ್ಯಸ್ಥರನ್ನೇ ನೇಮಕ ಮಾಡಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಪರ ಕೆಲಸ ಮಾಡಲು ಮುಖ್ಯಸ್ಥರುಗಳೇ ಇಲ್ಲದೆ ಪ್ರಾಧಿಕಾರಗಳು ನಿಸ್ತೇಜಗೊಂಡಿವೆ. ಕನ್ನಡವನ್ನು ಟಿಪ್ಪುವಿನಂತೆ ಅಳಿಸಿ ಹಾಕಲು ಪಣತೊಟ್ಟಂತೆ ಇರುವುದೇ… pic.twitter.com/T0yrIqYBOf
— BJP Karnataka (@BJP4Karnataka) December 25, 2023


























































