ಮುಂಬೈ: ಘಾಟ್ ಕೋಪರ್ನಲ್ಲಿ ಬಿರುಗಾಳಿಗೆ ಬೃಹತ್ ಹೋರ್ಡಿಂಗ್ ಕುಸಿದು ಬಿದ್ದ ಪ್ರಕರಣದಲ್ಲಿ ಖಾಸಗಿ ಕಂಪನಿಯ ಮಾಲೀಕನ್ನು ಪೊಲೀಸರು ಬಂಧಿಸಿದ್ದಾರೆ.
ಇಗೊ ಮಿಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಿಕ ಭವೇಶ್ ಭಿಂಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹೋರ್ಡಿಂಗನ್ನು ದುರ್ಬಲ ಕಂಬ ಮತ್ತು ಕಳಪೆ ಅಡಿಪಾಯ ಮೂಲಕ ಅಳವಡಿಸಿದ್ದರಿಂದಾಗಿ ಅನಾಹುತ ಸಂಭವಿಸಿದೆ. ಇದರಿಂದಾಗಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಹೋರ್ಡಿಂಗ್ ಅಳವಡಿಸಿದ್ದ ಭವೇಶ್ ಭಿಂಡೆ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಿದ್ದು, ಗುರುವಾರ ಸಂಜೆ ಜೈಪುರದ ಹೋಟೆಲ್ ಒಂದರಲ್ಲಿ ಬಂಧಿಸಲಾಗಿದೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ.




















































