ಬೆಂಗಳೂರು ಅಂತಾರಾಷ್ಟೀಯ ಚಲನಚಿತ್ರೋತ್ಸದ 13ನೇ ಆವೃತ್ತಿಯು ಈ ಬಾರಿ ಹೈಬ್ರಿಡ್ ಆಗಿದ್ದು, ಮಾರ್ಚ 3ರಿಂದ 10ನೇ ತಾರೀಖಿನವರೆಗೆ ಒರಾಯನ್ ಮಾಲ್‌ನಲ್ಲಿ ಪ್ರದರ್ಶಿತವಾಗಲಿದೆ. ಅದರ ಅಂಗವಾಗಿ, ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುತ್ತಿರುವ ಆಯ್ದ ಹಲವು ಚಿತ್ರಗಳು ಆನ್‌ಲೈನ್ (ಓಟಿಟಿ ಪ್ಲಾಟ್ ಫಾರಂ)ನಲ್ಲಿಯೂ ವೀಕ್ಷಿಸಲು ಲಭ್ಯವಿದೆ.
ಭಾರತದಾದ್ಯಂತ ಚಿತ್ರ ಪ್ರೇಮಿಗಳು, ಆಸಕ್ತರು ಒಟಿಟಿ ಪ್ಲಾಟ್ ಫಾರಂನ್ನು ಬಳಸಿಕೊಂಡು ಉತ್ಸವದಲ್ಲಿ ಪ್ರದರ್ಶಿತವಾಗುವ ಆಯ್ದ ಹಲವು ಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ಆನ್‌ಲೈನ್ ವೀಕ್ಷಣೆ ಹಾಗೂ ವೈಯುಕ್ತಿಕ ವೀಕ್ಷಣೆಗೆ ಪ್ರತ್ಯೇಕ ನೊಂದಣಿಗಳು ಅಗತ್ಯವಿದ್ದು, ಈಗಾಗಲೇ www.biffes.org ವೆಬ್ ಸೈಟ್‌ನಲ್ಲಿ ನೊಂದಣಿ ಆರಂಭವಾಗಿದೆ. ಚಲನಚಿತ್ರಗಳನ್ನು ಮಾರ್ಚ 4,2022ರಿಂದ ಮಾರ್ಚ 10,2022ರವರೆಗೆ ಪ್ರದರ್ಶಿಸಲಾಗುತ್ತದೆ. ನೊಂದಣಿ ವಿವರಗಳು www.biffes.org ನಲ್ಲಿ ಲಭ್ಯವಿದೆ. ಓಟಿಟಿ ಪ್ಲಾಟ್ ಫಾರಂನ ಲಾಗಿನ್ ವಿವರಗಳನ್ನು ನೊಂದಾಯಿಸಿದ ನಂತರ ಬಳಕೆದಾರರಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲದೆ ಒರಾಯನ್ ಮಾಲ್‌ನಲ್ಲಿ ವೈಯುಕ್ತಿಕವಾಗಿ ವೀಕ್ಷಿಸಲು ಹಾಗೂ ಆನ್‌ಲೈನ್ ವೀಕ್ಷಣೆಗೆ ನೊಂದಾಯಿಸಲು ಸಹ ಸೌಲಭ್ಯವಿರುತ್ತದ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.