‘ಆಡು ಜೀವಿತಂ’ ಇದೀಗ ಸಿನಿಮಾ ಜಗತ್ತಿನಲ್ಲಿ ಹೊಸ ದಾಖಲೆಗೆ ಮುನ್ನುಡಿ ಬರೆದಿದೆ. ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡು ಜೀವಿತಂ’ 100 ಕೋಟಿ ರೂಪಾಯಿ ಗಳಿಕೆಯ ದಾಖಲೆ ಪಟ್ಟಿಗೆ ಸೇರಿದೆ.
ಸಿನಿಮಾ ತೆರೆಕಂಡ ಎಂಟು ದಿನಗಳಲ್ಲಿ ‘ಆಡು ಜೀವಿತಂ’ 100 ಕೋಟಿ ರೂಪಾಯಿ ಕ್ಲಬ್ ಸೇರಿರುವುದು ಮಲಯಾಳಂ ಸಿನಿಮಾ ಲೋಕದಲ್ಲಿ ಮೊದಲ ದಾಖಲೆಯಾಗಿದೆ.
‘ಆಡುಜೀವಿತಂ’ನಲ್ಲಿ ಅಮಲಾ ಪೌಲ್, ಕೆಆರ್ ಗೋಕುಲ್ ನಟಿಸಿದ್ದಾರೆ. ಕೇರಳದ ವ್ಯಕ್ತಿ ಸೌದಿ ಅರೇಬಿಯಾಗೆ ಕೆಲಸ ಅರಸಿ ಹೋಗಿ ಅನುಭವಿಸಿದ ಕಥಾನಕವನ್ನು ಸಿನಿ ರಸಿಕರು ಸಕತ್ತಾಗಿಯೇ ಲೈಕ್ ಮಾಡಿದಂತಿದೆ.