ಟಾಲಿವುಡ್‍ನ ಮೋಸ್ಟ್ ವಾಟೆಂಡ್ ನಟಿಯರಲ್ಲಿ ಸಮಂತಾನೂ ಒಬ್ರು. ಸದ್ಯ ಜಾನು ಚಿತ್ರದ ಪ್ರೊಮೋಷನ್‍ನಲ್ಲಿ ಬ್ಯುಸಿಯಾಗಿರೋ ಸಮಂತಾ ಸಿನಿಪ್ರೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.ಎರಡು ವರ್ಷಗಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಈಗಲೇ ನಿರ್ಧಾರ ಮಾಡಿದ್ದಾರೆ.
ಹೌದು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ ಇನ್ನು ಎರಡು ಮೂರು ವರ್ಷ ಮಾತ್ರ ನಾನು ಚಿತ್ರಗಳಲ್ಲಿ ನಟಿಸುತ್ತೇನೆ. ಬಳಿಕ ನಟಿಸಲ್ಲ ಅನ್ನೋ ಮಾತನ್ನು ತಿಳಿಸಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.ಅಂದಹಾಗೆ ನಟರಿಗೆ ಹೋಲಿಸಿದ್ರೆ ನಟಿಯರಿಗೆ ಸಿನಿಮಾ ನಟನಾ ಸಮಯ ಕಡಿಮೆ . ಮಾತ್ರವಲ್ಲ ನನಗೆ ಮದುವೆಯಾಗಿದೆ ಕುಟುಂಬದ ಕಡೆ ಗಮನ ಕೊಡಬೇಕಾಗಿದೆ ಅಂತ ಹೇಳಿದ್ದಾರೆ