ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ಹೊರಡಿಸಿದ್ದು, ಅನುಷ್ಠಾನ ಕುರಿತು ಇನ್ನೆರಡು ದಿನಗಳಲ್ಲಿ, ಮಾರ್ಗದರ್ಶಿ ಸೂಚಿಯನ್ನು ಹೊರಡಿಸಲಾಗುವುದು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ, ಕರ್ನಾಟಕ ಸರಕಾರವೂ ೨೦೦೨ ರಲ್ಲಿ ಆದೇಶ ಮಾಡಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಧ್ವನಿವರ್ಧಕ ಉಪಯೋಗದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದೆ. ಯಾವ ಸಂದರ್ಭಗಳಲ್ಲಿ ಹಾಗೂ ಧ್ವನಿವರ್ಧಕಗಳಲ್ಲಿ ಎಷ್ಟು ಪ್ರಮಾಣದ ಡೆಸಿಬಿಲ್ ಇರಬೇಕು ಎನ್ನುವ ಕೋಷ್ಟಕ ಇದೆ. ವಸತಿ ಪ್ರದೇಶ, ಕೈಗಾರಿಕ ಹಾಗೂ ವಾಣಿಜ್ಯ ಪ್ರದೇಶ ಗಳಿಗೆ ಪ್ರತ್ಯೇಕ ವಾದ ಡೆಸಿಬೆಲ್ ಪ್ರಮಾಣವನ್ನು ನಿಗದಿ ಪಡಿಸಿ, ಮಾರ್ಗಸೂಚಿ ಗಳನ್ನು, ಹೊರಡಿಸಲಿದ್ದು ಅದನ್ನು ಅನುಷ್ಠಾನಕ್ಕೆ ತರಲಾಗುವುದು, ಎಂದು ಸಚಿವರು ಹೇಳಿದರು.
ವರ್ಷವಿಡೀ ಸಾರ್ವಜನಿಕ ಧ್ವನಿವರ್ಧಕ ಬಳಸುವವರು ಪರವಾನಗಿ ತೆಗೆದುಕೊಳ್ಳುವುದೂ ಸೇರಿದಂತೆ ಹಲವಾರು ವಿಚಾರಗಳು ಮಾರ್ಗಸೂಚಿಗಳು ಒಳಗೊಳ್ಳಲ್ಲಿದ್ದು, ಈ ಎಲ್ಲ ಅಂಶಗಳ ಪರಿಪಾಲನೆಗೆ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಗೃಹ ಸಚಿವರು, ಸ್ಪಷ್ಟಪಡಿಸಿದರು.