ಸ್ಯಾಂಡಲ್ ವುಡ್ ನಲ್ಲಿ ಮಿಟು ಆರೋಪವನ್ನು ಮಾಡುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ ಶ್ರುತಿ ಹರಿಹರನ್ ಈಗಂತೂ ತಾಯ್ತನವನ್ನು ಎಂಜಾಯ್ ಮಾಡ್ತಾ ಕಾಲ ಕಳೀತಿದ್ದಾರೆ. ಮಗಳ ನಾಮಕರಣದ ವೇಳೆ ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋವನ್ನು ಅಲ್ಪೋಡ್ ಮಾಡಿ, ಮಗಳನ್ನ ಮಾತ್ರ ಅಭಿಮಾನಿಗಳಿಗೆ ಪರಿಚಯಿಸಿರಲಿಲ್ಲ ಶ್ರುತಿ..ಆದ್ರೀಗ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿ ಮುದ್ದಾದ ಮಗಳನ್ನು ಮಾಧ್ಯಮದ ಮುಂದೆ ಕರೆತಂದಿದ್ದರು.
ನಟಿ ಶ್ರುತಿ ಹರಿಹರನ್ ಡೆಲಿವರಿ ಆಯ್ತು ಅಂದಾಗಿನಿಂದಲೂ ಮಗಳು ಹೇಗಿದ್ದಾಳೆ, ಏನ್ ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಕುತೂಹಲಕ್ಕೆ ತೆರೆಬಿದ್ದಿದೆ. ಮುದ್ದಾದ ಕಂದಮ್ಮನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿಭಟನೆ ಸಮಯದಲ್ಲಿ ಸೆರೆಹಿಡಿದ ಶ್ರುತಿ ಮಗಳ ಫೋಟೋ ವೈರಲ್ ಆಗಿದೆ.ಅಂದ್ಹಾಗೆ ಶ್ರುತಿ ಮಗಳಿಗೆ ಜಾನಕಿ ಎಂದು ನಾಮಕರಣ ಮಾಡಿದ್ದಾರೆ.
ಸದ್ಯ ಶ್ರುತಿ ಕೇರಳದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಕಲರಿಪಟ್ಟು ಕಲಾವಿದ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ನೃತ್ಯ ನಿರ್ದೇಶಕ.