ಸರಳತೆಗೆ ಹೆಸರು ಮಾಡಿರುವ ನಟರ ಪೈಕಿ ಶಿವರಾಜ್ ಕುಮಾರ್ ಕೂಡ ಒಬ್ಬರು..ಶಿವಣ್ಣ ನಿನ್ನೆಯಷ್ಟೇ ಸ್ನೇಹಿತರೊಂದಿಗೆ ಮುತ್ತತ್ತಿ ಹಾಗೂ ಮಲೆ ಮಹದೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ನಡುವೆ ಹೊಟ್ಟೆ ಹಸಿವಾದಾಗ ಆಡಂಬರದ ಹೊಟೇಲ್‍ಗಳತ್ತ ಮುಖ ಮಾಡದೆ, ಮಂಡ್ಯದ ಹಲಗೂರಿನ ಬಾಬು ಅವರ ಶೆಡ್ ಹೊಟೇಲ್‍ನಲ್ಲಿ ದೋಸೆ ತಿಂದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಶಿವಣ್ಣ,ನಾನು ಇಲ್ಲಿಗೆ ದೋಸೆ ತಿನ್ನಲು ಬರೋದು ಹೊಸದೇನಲ್ಲ. ಮನೆ ದೇವರಾದ ಮುತ್ತತ್ತಿ ರಾಯರ ಸನ್ನಿದಿಗೆ ಬರುವಾಗಲೆಲ್ಲಾ ಇಲ್ಲಿಯ ಬೆಣ್ಣೆ ದೋಸೆ ಸವಿಯುತ್ತೇನೆ ಅಂದಿದ್ದಾರೆ…ಈ ಬಾರಿ ಶಿವಣ್ಣನಿಗೆ ನಿರ್ದೇಶಕ ಗುರುದತ್ ಸಹ ಸಾಥ್ ನೀಡಿದ್ದಾರೆ. ಸ್ಟಾರ್ ನಟನೊಬ್ಬ ಇಂತಹ ಸರಳತೆ ಮೆರೆಯುತ್ತಿರುವುದು ಎಲ್ಲರ ಮೆಚಚುಗೆ ಗಳಿಸಿದೆ.
© 2020 Udaya News – Powered by RajasDigital.